ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಮತ್ತೊಂದು ದ್ವಿಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್'ನಲ್ಲಿ 3ನೇ ತ್ರಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ನವದೆಹಲಿ(ಡಿ.19): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಹಂಗಾಮಿ ನಾಯಕ ರೋಹಿತ್ ಶರ್ಮಾ ನಡುವಿನ ಟ್ವೀಟ್ ತಮಾಷೆ ಇಂದು ಸಾಕಷ್ಟು ಸದ್ದು ಮಾಡಿತು.
ವಿರಾಟ್ ವಿವಾಹಕ್ಕೆ ಟ್ವೀಟ್ ಮೂಲಕ ಶುಭ ಕೋರಿದ್ದ ರೋಹಿತ್, ಒಳ್ಳೆಯ ಗಂಡನಾಗುವುದು ಹೇಗೆ ಎಂಬ ಕೈಪಿಡಿ ಬೇಕಿದ್ದರೆ ಕೊಡುತ್ತೇನೆ ಎಂದು ಕಾಲೆಳೆದಿದ್ದರು.
ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ಧನ್ಯವಾದಗಳು. ಒಳ್ಳೆಯ ಗಂಡನಾಗುವುದು ಹಾಗಿರಲಿ, ಡಬಲ್ ಸೆಂಚುರಿ ಬಾರಿಸುವುದು ಹೇಗೆ ಎನ್ನುವ ಕೈಪಿಡಿ ಮೊದಲು ಕೊಡು' ಎಂದು ಟ್ವೀಟ್ ಮಾಡಿದ್ದಾರೆ.
ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಮತ್ತೊಂದು ದ್ವಿಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್'ನಲ್ಲಿ 3ನೇ ತ್ರಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.