ಕೊಹ್ಲಿ ಟಿ20&ಏಕದಿನ ವಿಶ್ವಕಪ್ ಗೆದ್ದುಕೊಡುತ್ತಾರೆ; ಈ ವರ್ಷದೊಳಗೆ ಸಚಿನ್ ದಾಖಲೆ ಉಡೀಸ್ ಮಾಡುತ್ತಾರೆಂದ ಜ್ಯೋತಿಷಿ

Virat Kohli Will Win T20I and ODI World Cup by 2025 Break Sachin Record Predicts Astrologer
Highlights

ಜ್ಯೋತಿಷಿ ನರೇಂದ್ರ ಬುಂಡೆ ಬಳಿ ಸೌರವ್ ಗಂಗೂಲಿ, ಜಹೀರ್ ಖಾನ್, ಗೌತಮ್ ಗಂಭೀರ್, ಸುರೇಶ್ ರೈನಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಸಲಹೆ ಪಡೆದುಕೊಂಡಿದ್ದಾರೆ.

ನವದೆಹಲಿ(ಮಾ.13): ನಾಗ್ಪುರದ ಕ್ರಿಕೆಟ್ ಜ್ಯೋತಿಷಿ ನರೇಂದ್ರ ಬುಂಡೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲ್ಲಲಿದೆ. 2025ರ ವೇಳೆಗೆ ಸಚಿನ್ ತೆಂಡುಲ್ಕರ್‌'ರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

‘ನಾನು ಈ ಹಿಂದೆ ಹೇಳಿದ್ದೆಲ್ಲಾ ನಿಜವಾಗಿದೆ. 2018ರಲ್ಲಿ ಕೊಹ್ಲಿ, ಕ್ರಿಕೆಟ್ ಲೋಕ ಹಿಂದೆಂದೂ ಕೇಳರಿಯದ ಮೊತ್ತದ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ’ ಎಂದು ನರೇಂದ್ರ ಹೇಳಿದ್ದಾರೆ. ಈ ಹಿಂದೆ ಸಚಿನ್‌'ಗೆ ಭಾರತ ರತ್ನ ಸಿಗಲಿದೆ, 2011ರ ವಿಶ್ವಕಪ್ ಗೆಲುವು ಸೇರಿ ಅನೇಕ ವಿಚಾರಗಳ ಬಗ್ಗೆ ಅವರು ಭವಿಷ್ಯ ನುಡಿದಿದ್ದರು.

ಜ್ಯೋತಿಷಿ ನರೇಂದ್ರ ಬುಂಡೆ ಬಳಿ ಸೌರವ್ ಗಂಗೂಲಿ, ಜಹೀರ್ ಖಾನ್, ಗೌತಮ್ ಗಂಭೀರ್, ಸುರೇಶ್ ರೈನಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಸಲಹೆ ಪಡೆದುಕೊಂಡಿದ್ದಾರೆ.

loader