ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಶೀಘ್ರದಲ್ಲೇ ದೆಹಲಿಯ ಮೇಡಮ್ ಟುಸಾಡ್ಸ್ ಕೇಂದ್ರದಲ್ಲಿ ಅನಾವರಣ ಗೊಳ್ಳಲಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಶೀಘ್ರದಲ್ಲೇ ದೆಹಲಿಯ ಮೇಡಮ್ ಟುಸಾಡ್ಸ್ ಕೇಂದ್ರದಲ್ಲಿ ಅನಾವರಣ ಗೊಳ್ಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ತೆಂಡುಲ್ಕರ್, ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಮೇಣದ ಪ್ರತಿಮೆಗಳು ಟುಸಾಡ್ಸ್‌ನಲ್ಲಿದ್ದು, ಇದೀಗ ಈ ಸಾಲಿಗೆ ಕೊಹ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಲಂಡನ್‌ನಿಂದ ಬಂದಿದ್ದ ಕಲಾವಿದರ ತಂಡ, ಬುಧವಾರ ವಿರಾಟ್‌ರ ಅಳತೆಯನ್ನು ತೆಗೆದುಕೊಂಡಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಕೊಹ್ಲಿ, 'ಇದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ' ಎಂದಿದ್ದಾರೆ.