Asianet Suvarna News Asianet Suvarna News

ಟೀಂ ಇಂಡಿಯಾ ನೂತನ ಕೋಚ್; ಯಾರ ಕಡೆ ಕೊಹ್ಲಿ ಒಲವು ?

ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ಕಸರತ್ತು ನಡೆಯುತ್ತಿದೆ. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಮುಂದಿನ ಕೋಚ್ ಯಾರಾಗಬೇಕು ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ. ಕೊಹ್ಲಿ ಪ್ರಕಾರ ಟೀಂ ಇಂಡಿಯಾ ನೂತನ ಕೋಚ್ ಯಾರಾಗಬೇಕು? ಇಲ್ಲಿದೆ ಉತ್ತರ.
 

Virat kohli wants Ravi shastri to continue as a team India coach
Author
Bengaluru, First Published Jul 30, 2019, 1:30 PM IST

ಮುಂಬೈ(ಜು.30): ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಪಾರ್ಟ್ನರ್‌ಶಿಪ್ ದಾಖಲೆಗಿಂತೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಜೊತೆಯಾಟ ಅದ್ಭುತವಾಗಿದೆ. ಸದ್ಯ ಬಿಸಿಸಿಐ ಟೀಂ ಇಂಡಿಯಾಗೆ ನೂತನ ಕೋಚ್ ಹುಡುಕಾಟದಲ್ಲಿದೆ. ಹಾಲಿ ಕೋಚ್ ರವಿ ಶಾಸ್ತ್ರಿ ಬದಲಾವಣೆ ಮಾಡಿ ಅನ್ನೋ ಕೂಗು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಕೊಹ್ಲಿ, ಟೀಂ ಇಂಡಿಯಾ ಮುಂದಿನ ಕೋಚ್ ಯಾರಾಗಬೇಕು ಅನ್ನೋದನ್ನು ಹೇಳಿದ್ದಾರೆ.

ಇದನ್ನೂ ಓದಿ: ಬ್ಯಾಟಿಂಗ್‌ ಕೋಚ್‌ ಹುದ್ದೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅರ್ಜಿ!

ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ನೂತನ ಕೋಚ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಾಲಿ ಕೋಚ್ ರವಿ ಶಾಸ್ತ್ರಿ ಹಾಗೂ ತಂಡ ನಡುವೆ ಉತ್ತಮ ಬಾಂದವ್ಯವಿದೆ. ಹೀಗಾಗಿ ಶಾಸ್ತ್ರಿ ಕೋಚ್ ಆಗಿ ಮುಂದುವರಿದರೆ ಉತ್ತಮ ಎಂದು ಕೊಹ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಕೋಚ್ ಆಯ್ಕೆ ಕುರಿತು ಕ್ರಿಕೆಟ್ ಸಲಹಾ ಸಮಿತಿ ನನ್ನನ್ನು ಸಂಪರ್ಕಿಸಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರವಿ ಶಾಸ್ತ್ರಿ ಕೋಚ್ ಭವಿಷ್ಯ; ಸೀಕ್ರೆಟ್ ಬಿಚ್ಚಿಟ್ಟಿ ಆಯ್ಕೆ ಸಮತಿ ಸದಸ್ಯ!

2015ರಲ್ಲಿ ಟೀಂ ಇಂಡಿಯಾ ನಿರ್ದೇಶಕನಾಗಿ ಜವಾಬ್ದಾರಿ ನಿರ್ವಹಿಸಿದ ರವಿ ಶಾಸ್ತ್ರಿ, 2017ರಲ್ಲಿ ಅನಿಲ್ ಕುಂಬ್ಳೆ ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಕೋಚ್ ಆಗಿ ಆಯ್ಕೆಯಾದರು. ರವಿ ಶಾಸ್ತ್ರಿ ಕೋಚ್ ಆಯ್ಕೆಗೆ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ದರು. ಇದೀಗ  ಶಾಸ್ತ್ರಿ ಮತ್ತೆ ಕೋಚ್ ಆಗಿ ಮುಂದುವರಿಯಲು ಕೊಹ್ಲಿ ಬಯಸಿದ್ದಾರೆ. 

Follow Us:
Download App:
  • android
  • ios