ರವಿ ಶಾಸ್ತ್ರಿ ಕೋಚ್ ಭವಿಷ್ಯ; ಸೀಕ್ರೆಟ್ ಬಿಚ್ಚಿಟ್ಟಿ ಆಯ್ಕೆ ಸಮಿತಿ ಸದಸ್ಯ!

ಟೀಂ ಇಂಡಿಯಾ ಕೋಚ್ ಆಯ್ಕೆ ಇದೀಗ ಚರ್ಚೆಗೆ ಕಾರಣವಾಗಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಮುಖ್ಯ ಕೋಚ್ ಬದಲಾವಣೆಗೆ ಮನಸ್ಸು ಮಾಡಿಲ್ಲ. ಹೀಗಾಗಿ ಕೋಚ್ ಆಯ್ಕೆ ಕಗ್ಗಂಟಾಗಿದೆ. ಈ ಕುರಿತು ಆಯ್ಕೆ ಸಮಿತಿ ಸದಸ್ಯ ಮಹತ್ವದ ಸುಳಿವು ನೀಡಿದ್ದಾರೆ. 

Slection committee member hints Team India coach ravi shastri future

ಮುಂಬೈ(ಜು.27): ಟೀಂ ಇಂಡಿಯಾ ಮುಖ್ಯ ಕೋಚ್ ಹಾಗೂ ಸಹಾಯ ಸಿಬ್ಬಂದಿ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಸದ್ಯ ರವಿ ಶಾಸ್ತ್ರಿ ಅವಧಿಯನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವಿಸ್ತರಿಸಲಾಗಿದೆ. ಇದರ ಬೆನ್ನಲ್ಲೇ ಮುಖ್ಯ ಕೋಚ್ ರವಿ ಶಾಸ್ತ್ರಿ ಬದಲಾವಣೆ ಇಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ. ಇದೀಗ ಆಯ್ಕೆ ಸಮಿತಿ ಸದಸ್ಯ ಅಂಶುಮಾನ್ ಗಾಯಕ್ವಾಡ್ ಶಾಸ್ತ್ರಿ  ಕೋಚ್ ಭವಿಷ್ಯದ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಬೌಲಿಂಗ್ ಕೋಚ್ ಅರುಣ್‌ ಸ್ಥಾನ ಗಟ್ಟಿ, ಬಾಂಗರ್‌ಗೆ ಸಂಕಷ್ಟ?

ಬಿಸಿಸಿಐ ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿಗೆ ಮುಂದುವರಿಯಲು ಸೂಚಿಸಲಾಗಿದೆ. ಇನ್ನು ಸಹಾಯಕ ಸಿಬ್ಬಂದಿಗೆ ಆಯ್ಕೆ ನಡೆಯಲಿದೆ ಎಂದು ಅಂಶುಮಾನ್ ಹೇಳಿದ್ದಾರೆ. ಅಂಶುಮಾನ್ ಪ್ರಕಾರ ಶಾಸ್ತ್ರಿ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಮುಂದುವರಿಯುವುದು ಬಹುತೇಕ ಖಚಿತಗೊಂಡಿದೆ. 

ಇದನ್ನೂ ಓದಿ: ಕೋಚ್ ಶಾಸ್ತ್ರಿ ಬದಲಾವಣೆ ತಂಡಕ್ಕೆ ನಷ್ಟ; ಅರ್ಜಿ ಆಹ್ವಾನಿಸಿ ನಾಟಕವಾಡಿತಾ BCCI?

ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸನ್ ಹಾಗೂ ಟೀಂ ಇಂಡಿಯಾ ಮಾಜಿ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸ್ತ್ರಿ ಮುಂದುವರಿಯುವ ಸಾಧ್ಯತೆ ಹೆಚ್ಚಿರುವುದರಿಂದ ಮುಖ್ಯ ಕೋಚ್ ಸ್ಥಾನ ಹೊಸಬರಿಗೆ ಲಭ್ಯವಿರುವುದಿಲ್ಲ. 
 

Latest Videos
Follow Us:
Download App:
  • android
  • ios