ಅದರಲ್ಲೂ ಮಾಲಿನ್ಯ ಕುರಿತು ಜಾಗೃತಿ ಮೂಡಿಸಲು ಓಲಾ ಸಂಸ್ಥೆ ಅಭಿಯಾನ ಕೈಗೊಂಡಿದ್ದು, ಇದಕ್ಕೆ ವಿರಾಟ್ ಬೆಂಬಲ ಸೂಚಿಸಿದ್ದಾರೆ.

ಕೋಲ್ಕತಾ(ನ.17): ರಾಷ್ಟ್ರ ರಾಜಧಾನಿಯಲ್ಲಿ ದಿನ ಕಳೆದಂತೆ ಹೆಚ್ಚಾಗುತ್ತಿರುವ ಮಾಲಿನ್ಯ ವಿರುದ್ಧದ ಹೋರಾಟಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಥ್ ನೀಡಿದ್ದಾರೆ.

ದೆಹಲಿ ಜನರು, ಸಾರ್ವಜನಿಕ ಸಾರಿಗೆಗಳಾದ ಮೆಟ್ರೋ ರೈಲು, ಬಸ್'ಗಳು ಹಾಗೂ ಓಲಾ ಶೇರ್ ವಾಹನಗಳನ್ನು ಬಳಸಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಕೇಳಿಕೊಂಡಿದ್ದಾರೆ.

ಅದರಲ್ಲೂ ಮಾಲಿನ್ಯ ಕುರಿತು ಜಾಗೃತಿ ಮೂಡಿಸಲು ಓಲಾ ಸಂಸ್ಥೆ ಅಭಿಯಾನ ಕೈಗೊಂಡಿದ್ದು, ಇದಕ್ಕೆ ವಿರಾಟ್ ಬೆಂಬಲ ಸೂಚಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ವಾಹನಗಳನ್ನು ಬಳಸುವುದಕ್ಕಿಂತ, ಓಲಾ ಶೇರಿಂಗ್‌'ನಂತಹ ವ್ಯವಸ್ಥೆಗಳನ್ನು ಬಳಸಿಕೊಳ್ಳಿ. ಇದರಿಂದ ವಾಯುಮಾಲಿನ್ಯ ಕಡಿಮೆಯಾಗಲಿದೆ. ಮಾಲಿನ್ಯ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ವಿರಾಟ್ ಕೊಹ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Scroll to load tweet…