ಪೋರ್ಟ್ ಆಫ್ ಸ್ಪೇನ್(ಆ.15): ಸ್ವಾತಂತ್ರ್ಯ ದಿನಾಚರಣೆ ಸಡಗರದಲ್ಲಿರುವ ಸಮಸ್ತ ಭಾರತೀಯರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ವೆಸ್ಟ್ ಇಂಡೀಸ್ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ, ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ. ಇದೇ ವೇಳೆ ಮನವಿ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ; ಶುಭಕೋರಿದ ಟೀಂ ಇಂಡಿಯಾ!

ಟ್ವಿಟರ್ ಮೂಲಕ ಮನವಿ ಮಾಡಿರುವ ಕೊಹ್ಲಿ, ಉತ್ತಮ  ಭಾರತಕ್ಕಾಗಿ, ಅಭಿವೃದ್ಧಿಗಾಗಿ ಜೊತೆಯಾಗಿ  ಶ್ರಮಿಸೋಣ. ನಮ್ಮ ಕನಸಿಕ  ಭಾರತವನ್ನು ನಿರ್ಮಿಸೋಣ ಎಂದು ಕೊಹ್ಲಿ ಆಗ್ರಹಿಸಿದ್ದಾರೆ.

 

ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯದ ಸರಣಿಯನ್ನು 2-0 ಅಂತರದಲ್ಲಿ ಭಾರತ ಗೆದ್ದುಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು, 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ, ಅಂತಿಮ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿ ಸರಣಿ ಗೆದ್ದುಕೊಂಡಿತು.