ಕೊಹ್ಲಿ ಕಾಲೆಳೆದ ಎಸೆಕ್ಸ್ ತಂಡದ ವಿರುದ್ಧ ಅಭಿಮಾನಿಗಳ ಆಕ್ರೋಶ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 29, Jul 2018, 12:03 PM IST
Virat Kohli tweet lands Essex Cricket in trouble with Indian cricket team fans
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ದ ಅಪ್ಪಿ ತಪ್ಪಿ ಒಂದು ಮಾತು ಆಡಿದರೆ ಅಭಿಮಾನಿಗಳು ಸುಮ್ಮನಿರ್ತಾರ? ಕೊಹ್ಲಿಯನ್ನ ಕಾಲೆಳೆದ ಎಸೆಕ್ಸ್ ತಂಡಕ್ಕೂ ಇದೀಗ ಅದೇ ಗತಿಯಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ? ಇಲ್ಲಿದೆ ವಿವರ.

ನವದೆಹಲಿ(ಜು.29): ಆಧುನಿಕ್ ಕ್ರಿಕೆಟ್‌ನ ಮಾಸ್ಟರ್ ಎಂದೇ ಕರೆಯಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೆಂತಾ ಬ್ಯಾಟ್ಸ್‌ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕುರಿತು ಕಾಲೆಳೆದ ಎಸೆಕ್ಸ್ ಕೌಂಟಿ ತಂಡಕ್ಕೆ ಅಭಿಮಾನಿಗಳು ತಕ್ಕ ಪಾಠ ನೀಡಿದ್ದಾರೆ.

 ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕಾಲೆಳೆದಿರುವ ಎಸೆಕ್ಸ್ ಕ್ರಿಕೆಟ್ ತಂಡ, ಈಗ ಕೊಹ್ಲಿ ಅಭಿಮಾನಿ ಗಳಿಂದಲೇ ಪಾಠ ಹೇಳಿಸಿಕೊಳ್ಳುವಂತಾಗಿದೆ. ಅಭ್ಯಾಸ ಪಂದ್ಯದ ವೇಳೆ ಎಸೆಕ್ಸ್ ಕ್ರಿಕೆಟ್ ತಂಡ ತನ್ನ ಟ್ವೀಟರ್ ಖಾತೆಯಲ್ಲಿ, ‘ಪರವಾಗಿಲ್ಲ, ಕೊಹ್ಲಿ ಉತ್ತಮವಾಗಿ ಆಡುತ್ತಾರೆ’ ಎಂದು ಬರೆದಿತ್ತು.

 

 

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ಕೊಹ್ಲಿ ಕ್ರಿಕೆಟ್‌ನ ರನ್ ಮಷಿನ್ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ನಿಮಗೆ ಈಗ ಗೊತ್ತಾಯಿತೆ ?’ ಎಂದಿದ್ದಾರೆ. ಟ್ವಿಟರ್ ಮೂಲಕ ಎಸೆಕ್ಸ್ ತಂಡದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿರುವ ಅಭಿಮಾನಿಗಳು,ಟ್ವೀಟ್ ಸಮರ ನಡೆಸಿದ್ದಾರೆ.

 

 

loader