ಶತಕ ವಂಚಿತ ಮಾರ್ಕ್'ರಮ್'ಗೆ ವಿರಾಟ್ ಹೇಳಿದ್ದೇನು ಗೊತ್ತಾ..?

Virat Kohli told me Well played you were unlucky to get out  says Aiden Markram
Highlights

ಕೇವಲ 6 ರನ್'ಗಳಿಂದ ಮೂರನೇ ಟೆಸ್ಟ್ ಶತಕ ಬಾರಿಸುವುದನ್ನು ತಪ್ಪಿಸಿಕೊಂಡ 23 ವರ್ಷದ ಆಟಗಾರ ಔಟ್ ಆಗುತ್ತಿದ್ದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿಯ ಮಾತನ್ನಾಡಿ ಕಿರು ಬೀಳ್ಕೊಡುಗೆ ನೀಡಿದ್ದಾರೆ. ನಾನು ಔಟ್ ಆಗುತ್ತಿದ್ದಂತೆ ನನ್ನ ಬಳಿ ಬಂದ ಕೊಹ್ಲಿ, 'ನೀನು ಚೆನ್ನಾಗಿ ಆಡಿದೆ. ಆದರೆ ನೀನು ಔಟ್ ಆಗಿದ್ದು ದುರಾದೃಷ್ಟಕರ' ಎಂದು ಕೊಹ್ಲಿ ಹೇಳಿದರು ಎಂದು ಮಾರ್ಕ್'ರಮ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟ್ಸ್'ಮನ್ ಎಡನ್ ಮಾರ್ಕ್'ರಮ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ.

ಕೇವಲ 6 ರನ್'ಗಳಿಂದ ಮೂರನೇ ಟೆಸ್ಟ್ ಶತಕ ಬಾರಿಸುವುದನ್ನು ತಪ್ಪಿಸಿಕೊಂಡ 23 ವರ್ಷದ ಆಟಗಾರ ಔಟ್ ಆಗುತ್ತಿದ್ದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿಯ ಮಾತನ್ನಾಡಿ ಕಿರು ಬೀಳ್ಕೊಡುಗೆ ನೀಡಿದ್ದಾರೆ. ನಾನು ಔಟ್ ಆಗುತ್ತಿದ್ದಂತೆ ನನ್ನ ಬಳಿ ಬಂದ ಕೊಹ್ಲಿ, 'ನೀನು ಚೆನ್ನಾಗಿ ಆಡಿದೆ. ಆದರೆ ನೀನು ಔಟ್ ಆಗಿದ್ದು ದುರಾದೃಷ್ಟಕರ' ಎಂದು ಕೊಹ್ಲಿ ಹೇಳಿದರು ಎಂದು ಮಾರ್ಕ್'ರಮ್ ಹೇಳಿದ್ದಾರೆ.

ಕೊಹ್ಲಿ ಎದುರಾಳಿ ತಂಡಕ್ಕೆ ಕಠಿಣ ಪ್ರತಿಸ್ಪರ್ಧಿ, ಮೈದಾನದೊಳಗೆ ಹಾಗೂ ಹೊರಗೆ ಉತ್ತಮ ಗುಣಗಳನ್ನು ಪ್ರದರ್ಶಿಸುವ ಅವರನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಮಾರ್ಕ್'ರಮ್ ಹೇಳಿದ್ದಾರೆ.

ಇದೇವೇಳೆ ಅಶ್ವಿನ್ ಅವರನ್ನೂ ಗುಣಗಾನ ಮಾಡಿದ ಮಾರ್ಕ್'ರಮ್, ಅವರೊಬ್ಬ ವಿಶ್ವದರ್ಜೆ ಬೌಲರ್, ಅವರನ್ನು ಎದುರಿಸುವುದು ಬ್ಯಾಟ್ಸ್'ಮನ್'ಗಳಿಗೆ ಸವಾಲೇ ಸರಿ ಎಂದು ಹೇಳಿದ್ದಾರೆ. ಎರಡನೇ ಟೆಸ್ಟ್'ನ ಮೊದಲ ದಿನ ಮಾರ್ಕ್'ರಮ್ 94 ರನ್ ಬಾರಿಸಿ ಅಶ್ವಿನ್ ಬೌಲಿಂಗ್'ನಲ್ಲಿ ಪಾರ್ಥಿವ್ ಪಟೇಲ್'ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.

loader