ಕೊಹ್ಲಿ ಗೈರು ಹಾಜರಿಯಲ್ಲಿ ಉಪನಾಯಕ ಅಜಿಂಕ್ಯಾ ರಹಾನೆ ರಾಂಚಿ ಟೆಸ್ಟ್ ಪಂದ್ಯವನ್ನು ಮುನ್ನೆಡೆಸಲಿದ್ದಾರೆ ಎಂದು ಟೀಂ ಇಂಡಿಯಾದ ಮೂಲಗಳು ತಿಳಿಸಿವೆ.
ರಾಂಚಿ(ಮಾ.16): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರಾಂಚಿ ಟೆಸ್ಟ್'ನಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಬಲಗೈ ಭುಜದ ನೋವಿಗೆ ತುತ್ತಾಗಿದ್ದು ಪ್ರಸಕ್ತ ಟೆಸ್ಟ್ ಪಂದ್ಯದಿಂದ ಹೊರಬಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಇಂದು ಸ್ಕ್ಯಾನಿಂಗ್'ಗೆ ಒಳಗಾಗಿದ್ದು, ವೈದ್ಯರು ಕೊಹ್ಲಿಗೆ ರಾಂಚಿ ಟೆಸ್ಟ್ ಆಡದಂತೆ ಸೂಚಿಸಿದ್ದಾರೆ. ಅಲ್ಲದೆ ಕೊಹ್ಲಿ ಇನ್ನು 10 ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಕೊಹ್ಲಿ ಗೈರು ಹಾಜರಿಯಲ್ಲಿ ಉಪನಾಯಕ ಅಜಿಂಕ್ಯಾ ರಹಾನೆ ರಾಂಚಿ ಟೆಸ್ಟ್ ಪಂದ್ಯವನ್ನು ಮುನ್ನೆಡೆಸಲಿದ್ದಾರೆ ಎಂದು ಟೀಂ ಇಂಡಿಯಾದ ಮೂಲಗಳು ತಿಳಿಸಿವೆ.