ಬೆಂಗಳೂರು[ಮೇ.05]: ವಿಶ್ವಕ್ರಿಕೆಟ್’ನ ಶ್ರೇಷ್ಠ ಬ್ಯಾಟ್ಸ್’ಮನ್ ವಿಕೆಟ್ ಪಡೆದರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ?. ವಿರಾಟ್ ವಿಕೆಟ್ ಪಡೆಯಲು ಬೌಲರ್’ಗಳು ಸಾಕಷ್ಟು ಬೆವರು ಹರಿಸುತ್ತಾರೆ. ಅದೇ ರೀತಿ ಸನ್’ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಖಲೀಲ್ ಅಹಮ್ಮದ್ ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ ವಿಕೆಟ್ ಪಡೆದು ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ್ದರು.

RCB ಪಂದ್ಯದ ವೇಳೆ ಹೃದಯ ಕದ್ದ ಸ್ಟೇಟ್ ಕ್ರಶ್, ಯಾರೀಕೆ?

ಮೊದಲು ಬ್ಯಾಟಿಂಗ್ ಮಾಡಿದ್ದ ಸನ್’ರೈಸರ್ಸ್ ಹೈದರಾಬಾದ್ ತಂಡ 175 ರನ್ ಕಲೆಹಾಕಿತ್ತು. ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಪಾರ್ಥಿವ್ ಪಟೇಲ್ ಶೂನ್ಯ ಸುತ್ತಿದರೆ, ನಾಯಕ ಕೊಹ್ಲಿ 7 ಎಸೆತಗಳಲ್ಲಿ 16 ರನ್ ಬಾರಿಸಿ ಖಲೀಲ್’ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪಡೆದ ಖುಷಿಯಲ್ಲಿ ಖಲೀಲ್ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡಿದ್ದರು.

ಹೀಗಿತ್ತು ನೋಡಿ ಆ ಕ್ಷಣ...

ಹೈದರಾಬಾದ್ ನೀಡಿದ್ದ ಗುರಿ ಬೆನ್ನತ್ತಿದ RCB ಕೇವಲ 20 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ 4ನೇ ವಿಕೆಟ್’ಗೆ ಶಿಮ್ರೋನ್ ಹೆಟ್ಮೇಯರ್ ಜೋಡಿ 144 ರನ್ ಸಿಡಿಸುವ ಮೂಲಕ RCB ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಬೆಂಗಳೂರು ತಂಡ 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟಗಳ ಭರ್ಜರಿ ಜಯ ಸಾಧಿಸುವ ಮೂಲಕ 12ನೇ ಆವೃತ್ತಿಗೆ ಗೆಲುವಿನೊಂದಿಗೆ ವಿದಾಯ ಹೇಳಿತು.

ಗೆಲುವಿನ ಬೆನ್ನಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಕೊಹ್ಲಿ ವೇಗಿ ಖಲೀಲ್ ಅವರನ್ನು ಅವರದ್ದೇ ಶೈಲಿಯಲ್ಲಿ ಕಾಲೆಳೆದರು. 

ಹೀಗಿತ್ತು ನೋಡಿ ಆ ಕ್ಷಣ....