ವೃತ್ತಿ ಜೀವನದಲ್ಲಿ ಅದ್ಭುತ ಫಾರ್ಮ್'ನಲ್ಲಿರುವ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 871 ರನ್ ಸಿಡಿಸಿ ಮಿಂಚಿದ್ದರು. ಇನ್ನು ಆರ್'ಸಿಬಿ ಪ್ರಾಂಚೈಸಿ ವಿರಾಟ್'ಗೆ 17 ಕೋಟಿ ನೀಡಿ ತಮ್ಮ ತಂಡದಲ್ಲೇ ಉಳಿಸಿಕೊಂಡಿದೆ.
ನವದೆಹಲಿ(ಮಾ.03): ವಿಶ್ವದ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಳಸುವ ಪರ್ಸ್ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ವಿಮಾನ ನಿಲ್ದಾಣವೊಂದರಲ್ಲಿ ಕೊಹ್ಲಿ ಪರ್ಸ್ ಕೈಯಲ್ಲಿ ಹಿಡಿದು ಹೋಗಿದ್ದಾರೆ. ಅವರ ಫೋಟೋಗಳನ್ನು ಗಮನಿಸಿದ ಅಭಿಮಾನಿಗಳು, ಕೊಹ್ಲಿಯ ಕೈಯಲ್ಲಿರುವ ಪರ್ಸ್ ಯಾವುದು ಎಂದು ಆನ್'ಲೈನ್'ನಲ್ಲಿ ಹುಡುಕಾಟ ನಡೆಸಿದಾಗ ಅದು ಅಂತಾರಾಷ್ಟ್ರೀಯ ಬ್ರಾಂಡ್ ‘ಲೂಯಿ ವಿಟ್ಟಾನ್’ನ ಝಿಪಿ ಎಕ್ಸ್‌ಎಲ್ ಲಿಮಿಟೆಡ್ ಎಡಿಷನ್ ಪರ್ಸ್ ಎಂದು ತಿಳಿದುಬಂದಿದ್ದು, ಇದರ ಬೆಲೆ ಬರೋಬ್ಬರಿ 1250 ಅಮೆರಿಕನ್ ಡಾಲರ್ (ಅಂದಾಜು 81,144 ರುಪಾಯಿಗಳು)ಎನ್ನಲಾಗಿದೆ.
ವೃತ್ತಿ ಜೀವನದಲ್ಲಿ ಅದ್ಭುತ ಫಾರ್ಮ್'ನಲ್ಲಿರುವ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 871 ರನ್ ಸಿಡಿಸಿ ಮಿಂಚಿದ್ದರು. ಇನ್ನು ಆರ್'ಸಿಬಿ ಪ್ರಾಂಚೈಸಿ ವಿರಾಟ್'ಗೆ 17 ಕೋಟಿ ನೀಡಿ ತಮ್ಮ ತಂಡದಲ್ಲೇ ಉಳಿಸಿಕೊಂಡಿದೆ.