Asianet Suvarna News Asianet Suvarna News

ಮುಂದಿನ ಐಪಿಎಲ್'ನ ಆರ್'ಸಿಬಿ'ಯಲ್ಲಿ ಇದೇ ಆಟಗಾರರಲ್ಲಿ ಯಾರು ಇರ್ತಾರೆ? ಇದಕ್ಕೆ ಕೊಹ್ಲಿ ಏನಂತಾರೆ ?

14 ಪಂದ್ಯ'ಗಳಲ್ಲಿ ಕೇವಲ 3 ಪಂದ್ಯ ಗೆದ್ದು,1 ಮ್ಯಾಚ್ ಮಳೆಯಿಂದ ರದ್ದಾಗಿ 10ರಲ್ಲಿ ಸೋಲನ್ನು ಅನುಭವಿಸಿತ್ತು. ತಂಡದ ಪ್ರದರ್ಶನ ಕಳೆಪೆಯಾದರೂ ನಾಯಕ ವಿರಾಟ್ ಕೊಹ್ಲಿ ತಾವು ಮಾತ್ರ 4 ಅರ್ಧ ಶತಕಗಳೊಂದಿಗೆ 300ಕ್ಕೂ ರನ್'ಗಳನ್ನು ಬಾರಿಸಿ ಉತ್ತಮ ಪ್ರದರ್ಶನ ನೀಡಿದ್ದರು.

Virat Kohli Speak about next IPL
  • Facebook
  • Twitter
  • Whatsapp

ಐಪಿ'ಎಲ್ 10ನೇ ಆವೃತ್ತಿಯ ಲೀಗ್ ಪಂದ್ಯ'ಗಳೆಲ್ಲ ಮುಗಿದು ಪ್ಲೇ-ಆಫ್' ಮ್ಯಾಚ್'ಗಳು ಇಂದಿನಿಂದ ಆರಂಭವಾಗಲಿವೆ. ತವರು ತಂಡ ಆರ್'ಸಿಬಿ ಕೊನೆಯ ಪಂದ್ಯದಲ್ಲಿ ಡಿಲ್ಲಿ ಡೇರ್'ಡೇವಿಲ್ಸ್ ವಿರುದ್ಧ ಗೆದ್ದರೂ ಪ್ರದರ್ಶನ ಮಾತ್ರ ಹಿನಾಯವಾಗಿತ್ತು.

14 ಪಂದ್ಯ'ಗಳಲ್ಲಿ ಕೇವಲ 3 ಪಂದ್ಯ ಗೆದ್ದು,1 ಮ್ಯಾಚ್ ಮಳೆಯಿಂದ ರದ್ದಾಗಿ 10ರಲ್ಲಿ ಸೋಲನ್ನು ಅನುಭವಿಸಿತ್ತು. ತಂಡದ ಪ್ರದರ್ಶನ ಕಳೆಪೆಯಾದರೂ ನಾಯಕ ವಿರಾಟ್ ಕೊಹ್ಲಿ ತಾವು ಮಾತ್ರ 4 ಅರ್ಧ ಶತಕಗಳೊಂದಿಗೆ 300ಕ್ಕೂ ರನ್'ಗಳನ್ನು ಬಾರಿಸಿ ಉತ್ತಮ ಪ್ರದರ್ಶನ ನೀಡಿದ್ದರು.

ಆರ್'ಸಿಬಿಯ ಮತ್ಯಾವುದೆ ಆಟಗಾರ ಕೊಹ್ಲಿಯಷ್ಟು ಆಟವಾಡಿರಲಿಲ್ಲ. ಎಬಿಡಿ ಒಂದೆರಡು ಪಂದ್ಯಗಳಲ್ಲಿ ಮಿಂಚಿದ್ದರೂ ಉಳಿದ ಪಂದ್ಯ'ಗಳಲ್ಲಿ ಅವರ ಬ್ಯಾಟಿಂಗ್ ಹೇಳಿಕೊಳ್ಳುವಂತಿರಲಿಲ್ಲ. ಸಿಕ್ಸ'ರ್' ಎತ್ತುವುದರಲ್ಲಿ ಖ್ಯಾತಿ ಹೊಂದಿದ್ದ ಕ್ರಿಸ್ ಗೇಲ್ ಸಂಪೂರ್ಣ ವಿಫಲ'ವಾಗಿದ್ದರು.

ಈ ಬಗ್ಗೆ ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತ'ಪಡಿಸಿದ್ದು, ಮುಂದಿನ ಆವೃತ್ತಿಯಲ್ಲಿ ಈಗಾಗದಂತಿರಲಿ, ಇದೇ ತಂಡದ ಆಟಗಾರರು ಇರ್ತಾರೆ ಎಂಬುದಕ್ಕೆ ನಾನು ಸಂಪೂರ್ಣ ಭರವಸೆ ನೀಡಲಾರೆ. ಆಟಗಾರರ ಹಾಗೂ ಫ್ರ್ಯಾಂಚೈಸ್ ಮನಸ್ಥಿತಿ ಹೇಗಿದೆಯೋ. ಬದಲಾವಣೆ ಆದರೂ ಆಗಬಹುದು' ಎಂದು ಆಟಗಾರರು ಬದಲಾವಣೆ ಸಾದ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.

Follow Us:
Download App:
  • android
  • ios