ಬೆಂಗಳೂರು ಟೆಸ್ಟ್‌'ನಲ್ಲಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಬಳಿಕ ಭಾರತದ ಸ್ಪಿನ್‌ ಜೋಡಿ ಅಗ್ರಸ್ಥಾನವನ್ನ ಹಂಚಿಕೊಂಡಿತ್ತು.
ದುಬೈ(ಮಾ.14): ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್'ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಕುಸಿತ ಕಂಡಿದ್ದಾರೆ. ಒಂದು ಸ್ಥಾನ ಹಿಂಬಡ್ತಿ ಪಡೆದಿರುವ ಕೊಹ್ಲಿ 3ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಆಸ್ಪ್ರೇಲಿಯಾ ವಿರುದ್ಧ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ 0,13,12 ಹಾಗೂ 15 ಸ್ಕೋರ್'ಗಳ ಮೂಲಕ ಸಾಧಾರಣ ಪ್ರದರ್ಶನ ನೀಡಿರುವ ಕೊಹ್ಲಿ (847) ಪಾಯಿಂಟ್ಸ್ ಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಇನ್ನು ಆಸ್ಪ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ (936) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಅಮೋಘ 130 ರನ್'ಗಳಿಸಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (869) ಅಂಕಗಳಿಂದ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. (848) ಅಂಕಗಳಿಸಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 3ನೇ ಸ್ಥಾನದಲ್ಲಿದ್ದಾರೆ. ಭಾರತದ ನಂಬಿಕಸ್ಥ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಸ್ಥಿರ ಪ್ರದರ್ಶನದಿಂದ 6ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಕೆಲ ವಾರಗಳ ಹಿಂದಷ್ಟೇ ಐಸಿಸಿ ಟೆಸ್ಟ್ ಆಲ್ರೌಂಡರ್'ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದ ಭಾರತದ ರವಿಚಂದ್ರನ್ ಅಶ್ವಿನ್, ಮತ್ತೆ ನಂ.1 ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಒಟ್ಟು (434) ಅಂಕಗಳಿಸಿರುವ ಅಶ್ವಿನ್, ಬಾಂಗ್ಲಾದೇಶದ ಶಕೀಬ್-ಅಲ್ ಹಸನ್(403) ಅವರನ್ನು ಹಿಂದಿಕ್ಕಿದ್ದಾರೆ. ಇದೇ ವೇಳೆ ಟೆಸ್ಟ್ ಬೌಲರ್'ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಆರ್.ಅಶ್ವಿನ್ ಮೊದಲ ಸ್ಥಾನ ಪಡೆದಿದ್ದು, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬೆಂಗಳೂರು ಟೆಸ್ಟ್'ನಲ್ಲಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಬಳಿಕ ಭಾರತದ ಸ್ಪಿನ್ ಜೋಡಿ ಅಗ್ರಸ್ಥಾನವನ್ನ ಹಂಚಿಕೊಂಡಿತ್ತು.
