ಮೈದಾನದಲ್ಲಿ ಯಾವಾಗಲು ಆಕ್ರಮಣಕಾರಿಯಾಗಿ ತಂಡವನ್ನು ಮುನ್ನಡೆಸುವ ವಿರಾಟ್ ಕೊಹ್ಲಿಯ ನಾಯಕತ್ವ ನನಗೆ ಇಷ್ಟ. ವಿರಾಟ್ ನಿಜಕ್ಕೂ ಬುದ್ದಿವಂತ ಕ್ರಿಕೆಟಿಗ. ಪ್ರತಿ ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಆತನ ಮನೋಭಾವವನ್ನು ಗಮನಿಸಿದರೆ ಆಸೀಸ್ ನಾಯಕ ರಿಕಿ ಪಾಂಟಿಂಗ್ ನೆನಪಾಗುತ್ತಾರೆ.
ನವದೆಹಲಿ(ಆ.16): ಆಕ್ರಮಣಕಾರಿ ಮನೋಧೋರಣೆಯ ವಿರಾಟ್ ಕೊಹ್ಲಿಯ ನಾಯಕತ್ವವು ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಶೈಲಿಯನ್ನು ಹೋಲುತ್ತದೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಮೈಕ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.
ಮೈದಾನದಲ್ಲಿ ಯಾವಾಗಲು ಆಕ್ರಮಣಕಾರಿಯಾಗಿ ತಂಡವನ್ನು ಮುನ್ನಡೆಸುವ ವಿರಾಟ್ ಕೊಹ್ಲಿಯ ನಾಯಕತ್ವ ನನಗೆ ಇಷ್ಟ. ವಿರಾಟ್ ನಿಜಕ್ಕೂ ಬುದ್ದಿವಂತ ಕ್ರಿಕೆಟಿಗ. ಪ್ರತಿ ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಆತನ ಮನೋಭಾವವನ್ನು ಗಮನಿಸಿದರೆ ಆಸೀಸ್ ನಾಯಕ ರಿಕಿ ಪಾಂಟಿಂಗ್ ನೆನಪಾಗುತ್ತಾರೆ. ಈ ಇಬ್ಬರು ಆಟಗಾರರ ನಡುವೆ ಸಾಕಷ್ಟು ಸಾಮ್ಯತೆಯಿದೆ ಎಂದು ಮಿ. ಕ್ರಿಕೆಟ್ ಎಂದೇ ಕರೆಯಲ್ಪಡುವ ಮೈಕ್ ಹಸ್ಸಿ ಹೇಳಿದ್ದಾರೆ.
ಮುಂದಿನ ತಿಂಗಳು ಆಸ್ಟ್ರೇಲಿಯಾ ತಂಡವು ಸೀಮಿತ ಓವರ್'ಗಳ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಸ್ಸಿ, ಇದೊಂದು ಉತ್ತಮ ಸರಣಿಯಾಗಲಿದೆ. ಲಂಕಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾ ಆತ್ಮವಿಶ್ವಾಸದಿಂದಲೇ ಆಸೀಸ್ ತಂಡವನ್ನು ಎದುರಿಸಲಿದೆ. ಆದರೆ ಆಸ್ಟ್ರೇಲಿಯಾ ಪಡೆಯು ಟೀಂ ಇಂಡಿಯಾಗೆ ತಕ್ಕ ಪೈಪೋಟಿ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
