ಈ ಮೊದಲು ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್'ನಲ್ಲಿ 333ರನ್'ಗಳ ಹೀನಾಯ ಸೋಲಿನ ಬಳಿಕ ಕೊಹ್ಲಿ ಟ್ರಕ್ಕಿಂಗ್ ಮಾಡಿ ನಿರಾಸೆ ಮರೆಯಲು ಮುಂದಾಗಿದ್ದರು.  

ಗ್ರೇಟರ್ ನೋಯ್ಡಾ(ಮೇ.20): ಪ್ರಸಕ್ತ ಐಪಿಎಲ್'ನ ಕಹಿ ಅನುಭವದಿಂದ ಹೊರ ಬರಲು ಕೊಹ್ಲಿ ಹೊಸ ಮಾಸ್ಟರ್ ಪ್ಲಾನ್'ವೊಂದನ್ನು ಕಂಡುಕೊಂಡಿದ್ದಾರೆ.

ಹೌದು ಸದ್ಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಕೊಹ್ಲಿ, ಬುದ್ದ ಅಂತರಾಷ್ಟ್ರೀಯ ಸರ್ಕ್ಯೂಟ್'ನಲ್ಲಿ ತಮ್ಮ ಆರ್8 ಕಾರನ್ನು ಗಂಟೆಗೆ 280 ಕಿ.ಮೀ ವೇಗದಲ್ಲಿ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.

"ಇದಕ್ಕೂ ಮುನ್ನ ಗಂಟೆಗೆ 290 ಕಿ.ಮೀ ವೇಗದಲ್ಲಿ ಕಾರನ್ನು ಓಡಿಸಿದ್ದೆ. ಆದರೆ ವೃತ್ತಿಪರ ಚಾಲಕರಂತೆ ಹಿಂದಿನ ದಾಖಲೆಯನ್ನು ಮುರಿಯಲು ಈ ಬಾರಿ ಸಾಧ್ಯವಾಗಿಲ್ಲ" ಎಂದು ಕೊಹ್ಲಿ ಹೇಳಿದ್ದಾರೆ.

ಈ ಮೊದಲು ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್'ನಲ್ಲಿ 333ರನ್'ಗಳ ಹೀನಾಯ ಸೋಲಿನ ಬಳಿಕ ಕೊಹ್ಲಿ ಟ್ರಕ್ಕಿಂಗ್ ಮಾಡಿ ನಿರಾಸೆ ಮರೆಯಲು ಮುಂದಾಗಿದ್ದರು.