ಕೊನೆಗೂ ಕೊಹ್ಲಿ ಆಗಮನ ಆರ್'ಸಿಬಿ ತಂಡಕ್ಕೆ ಆನೆಬಲ ಬಂದಂತಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಬೆಂಗಳೂರು(ಏ.11): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ರಾಂಚಿ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡು ಕೊನೆಯ ಟೆಸ್ಟ್'ನಿಂದಲೂ ಹೊರಗುಳಿದಿದ್ದ ಕೊಹ್ಲಿ ತಾವು 120% ಫಿಟ್ ಆಗದ ಹೊರತು ಮೈದಾನಕ್ಕಿಳಿಯುವುದಿಲ್ಲ ಎಂದಿದ್ದರು. ತಾವು ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟು ಕೊಂಡಿರುವುದರಿಂದ ಯಾವುದೇ ರಿಸ್ಕ್ ತೆಗೆದುಕೊಳ್ಳಲು ತಾವು ತಯಾರಿಲ್ಲ ಎಂದು ಈ ಮೊದಲು ಕೊಹ್ಲಿ ತಿಳಿಸಿದ್ದರು.
ಆದರೆ ಈಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ ಕೊಹ್ಲಿ ತಾವು ಏಪ್ರಿಲ್ 14ರಂದು ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್'ಸಿಬಿ ಕಣಕ್ಕಿಳಿಯುವುದಾದಿ ಸ್ವತಃ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಕೊನೆಗೂ ಕೊಹ್ಲಿ ಆಗಮನ ಆರ್'ಸಿಬಿ ತಂಡಕ್ಕೆ ಆನೆಬಲ ಬಂದಂತಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಇನ್ಮುಂದೆ ಮತ್ತೆ ಕೊಹ್ಲಿ ಎಬಿಡಿ ಜುಗಲ್'ಬಂದಿ ನೋಡಲು ಆರ್'ಸಿಬಿ ಅಭಿಮಾನಿಗಳೆ ರೆಡಿಯಾಗಿ....
