ಕೌಂಟಿ ಕ್ರಿಕೆಟ್ ಆಡಲಿರುವ ವಿರಾಟ್ : ಸೋಲಿನ ಭಯಕ್ಕಾಗಿಯೇ ?

First Published 25, Mar 2018, 11:35 AM IST
Virat Kohli Opts for County Stint Before Indias Tour of England
Highlights

ಇದರಿಂದ ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ವಿರಾಟ್ ಅವರದ್ದಾಗಿದೆ. ಇಂಗ್ಲೆಂಡ್‌ನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್‌ಗಳಲ್ಲಿ ಒಂದಾದ ಸರ್ರೆ ತಂಡದ ಪರವಾಗಿ ಕೊಹ್ಲಿ ಆಡುವುದು ಬಹುತೇಕ ಖಚಿತವಾಗಿದೆ.

ನವದೆಹಲಿ: ಮುಂಬರುವ ಇಂಗ್ಲೆಂಡ್ ಪ್ರವಾಸವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಐಪಿಎಲ್ ಮುಗಿಯುತ್ತಿದ್ದಂತೆ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ವಿರಾಟ್ ಅವರದ್ದಾಗಿದೆ. ಇಂಗ್ಲೆಂಡ್‌ನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್‌ಗಳಲ್ಲಿ ಒಂದಾದ ಸರ್ರೆ ತಂಡದ ಪರವಾಗಿ ಕೊಹ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಇಂಗ್ಲೆಂಡ್‌ಗೆ ತೆರಳುವ ಕಾರಣ ಭಾರತದಲ್ಲಿ ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ವಿರಾಟ್ ಅಲಭ್ಯರಾಗಲಿದ್ದಾರೆ. ಜೂನ್ ಅಂತ್ಯದ ವೇಳೆಗೆ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು 5 ಟೆಸ್ಟ್, 3 ಟಿ20 ಹಾಗೂ 3 ಏಕದಿನ ಸರಣಿಯನ್ನಾಡಲಿದೆ.

ಜೂನ್‌ನಲ್ಲಿ ಟೆಸ್ಟ್ ತಜ್ಞರು ಇಂಗ್ಲೆಂಡ್‌ಗೆ

ಭಾರತ  ‘ಎ’ ತಂಡದ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಲು ಹಿರಿಯ ತಂಡದ ಕೆಲ ಟೆಸ್ಟ್ ತಜ್ಞರು ತೆರಳಲಿದ್ದಾರೆ ಎಂದು ವಿನೋದ್ ರೈ ತಿಳಿಸಿದ್ದಾರೆ.

loader