ಈಗ ನಾಯಕ ವಿರಾಟ್ ಕೊಹ್ಲಿ(37) ಹಾಗೂ ದಿನೇಶ್ ಕಾರ್ತಿಕ್(21) ಬ್ಯಾಟಿಂಗ್ ಮುಂದುವರೆಸಿದ್ದು 22 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿದೆ.   

ಮುಂಬೈ(ಅ.22): ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿರಾಟ್ ಪಡೆಗೆ ವೇಗಿ ಟ್ರೆಂಟ್ ಬೌಲ್ಟ್ ಮಾರಕವಾಗಿ ಪರಿಣಮಿಸಿದರು. ತಂಡದ ಮೊತ್ತ 16 ರನ್'ಗಳಿದ್ದಾಗ ಆರಂಭಿಕ ಬ್ಯಾಟ್ಸ್'ಮನ್ ಶಿಖರ್ ಧವನ್ ಅವರನ್ನು ಔಟ್ ಮಾಡುವಲ್ಲಿ ಬೌಲ್ಟ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡುವ ಮುನ್ಸೂಚನೆ ನೀಡಿದ್ದ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆರಂಭಿಕ ಬ್ಯಾಟ್ಸ್'ಮನ್'ಗಳಿಬ್ಬರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಬೌಲ್ಟ್ ಯಶಸ್ವಿಯಾದರೆ, ಕೇದಾರ್ ಜಾಧವ್ ಅವರನ್ನು ಸ್ಯಾಂಟರ್ ಬಲಿ ಪಡೆದರು. ಈ ವೇಳೆ ತಂಡದ ಮೊತ್ತ 71/3.

ಈಗ ನಾಯಕ ವಿರಾಟ್ ಕೊಹ್ಲಿ(37) ಹಾಗೂ ದಿನೇಶ್ ಕಾರ್ತಿಕ್(21) ಬ್ಯಾಟಿಂಗ್ ಮುಂದುವರೆಸಿದ್ದು 22 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿದೆ.