ಕೊಹ್ಲಿ ಮಷಿನ್ ಅಲ್ಲ, ಮನುಷ್ಯ: ರವಿಶಾಸ್ತ್ರಿ

Virat Kohli Needs Rest He Not a Machine Says Ravi Shastri
Highlights

ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಮೇ 17ರಂದು ಸನ್’ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಕತ್ತು ನೋವಿಗೆ ತುತ್ತಾಗಿದ್ದರು. ಆದರೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆರ್’ಸಿಬಿ ಪರ ಕಣಕ್ಕಿಳಿದಿದ್ದರು. 

ನವದೆಹಲಿ[ಮೇ.26]: ಗಾಯಗೊಂಡು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ತಪ್ಪಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿಯನ್ನು ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಸಮರ್ಥಿಸಿಕೊಂಡಿದ್ದಾರೆ.
ಸರ್ರೆ ಪರ ಕೌಂಟಿ ಕ್ರಿಕೆಟ್ ಆಡಬೇಕಿದ್ದ ವಿರಾಟ್ ಕುತ್ತಿಗೆ ಗಾಯದ ಕಾರಣ, ಪ್ರವಾಸವನ್ನು ರದ್ದುಗೊಳಿಸಿದರು. ‘ಕೊಹ್ಲಿ ನಿರಂತರವಾಗಿ ಕ್ರಿಕೆಟ್ ಆಡಲು ಅವರು ಮಷಿನ್ ಅಲ್ಲ. ಎಲ್ಲರಂತೆ ಮನುಷ್ಯ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಗಾಯಗೊಳ್ಳುವುದು ಸಹಜ’ ಎಂದು ಶಾಸ್ತ್ರಿ ಹೇಳಿದ್ದಾರೆ. 

loader