ಚೆನ್ನೈ(ಮಾ.21): ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಹೋರಾಟ ನಡೆಸಲಿದೆ. ಮಾ.23ರಂದು 12ನೇ ಆವೃತ್ತಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕಾಗಿ RCB ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದೆ. ಪ್ರಾಕ್ಟೀಸ್ ವೇಳೆ RCB ನಾಯಕ ವಿರಾಟ್ ಕೊಹ್ಲಿ ಹಾಗೂ CSK ನಾಯಕ ಎಂ.ಎಸ್.ಧೋನಿ ಭೇಟಿಯಾಗಿದ್ದಾರೆ. 

ಇದನ್ನೂ ಓದಿ: IPL 2019: RCB ಆಟಗಾರರ ಕಂಪ್ಲೀಟ್ ಲಿಸ್ಟ್!

ಎಂ.ಎ.ಚಿಂದಂಬರಂ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಅಭ್ಯಾಸ ನಡೆಸಿತು. ಈ ವೇಳೆ ಧೋನಿ ಹಾಗೂ ಕೊಹ್ಲಿ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದರು. ನಾಯಕರಿಬ್ಬರ ಭೇಟಿಯ ಫೋಟೋವನ್ನು CSK ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

 

 

ಇದನ್ನೂ ಓದಿ: IPl 2019: RCB ವಿರುದ್ಧದ ಮೊದಲ ಪಂದ್ಯಕ್ಕೂ ಮೊದಲೇ CSKಗೆ ಶಾಕ್!

ಮೊದಲ ಆವೃತ್ತಿಯಿಂದ ಎಂ.ಎಸ್.ಧೋನಿ CSK ತಂಡದ ನಾಯಕರಾಗಿದ್ದಾರೆ. ಆದರೆ ಕೊಹ್ಲಿ 2012ರಿಂದ RCB ತಂಡದ ನಾಯಕತ್ವ  ವಹಿಸಿಕೊಂಡಿದ್ದಾರೆ. ಧೋನಿ ನಾಯಕತ್ವದ CSK 3 ಐಪಿಎಲ್ ಟ್ರೋಫಿ ಗೆದ್ದಿದರೆ, RCB ಚೊಚ್ಚಲ ಪ್ರಶಸ್ತಿ ಗೆಲ್ಲೋ ವಿಶ್ವಾಸದಲ್ಲಿದೆ.