ಇಂಗ್ಲೆಂಡ್’ನಲ್ಲಿ ಭಾರತ ’ಎ’ ಪರವೂ ಕೊಹ್ಲಿ ಆಟ..?

Virat Kohli might play India A game vs Lions if required
Highlights

ಭಾರತ ‘ಎ’ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ವೋರ್ಸೆಸ್ಟರ್‌’ನಲ್ಲಿ 4 ದಿನಗಳ ಟೆಸ್ಟ್ ಪಂದ್ಯವನ್ನಾಡಲಿದ್ದು ಈ ಪಂದ್ಯದಲ್ಲೂ ಆಡಲು ಕೊಹ್ಲಿ ಚಿಂತನೆ ನಡೆಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. 

ನವದೆಹಲಿ[ಮೇ.11]: ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೌಂಟಿ ಪಂದ್ಯಗಳು ಮಾತ್ರವಲ್ಲದೆ ಮಹತ್ವದ ಸರಣಿಗೆ ತಯಾರಿ ನಡೆಸಲು, ಭಾರತ ‘ಎ’ ತಂಡದಲ್ಲೂ ಆಡುವ ಸಾಧ್ಯತೆ ಇದೆ. 

ಭಾರತ ‘ಎ’ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ವೋರ್ಸೆಸ್ಟರ್‌’ನಲ್ಲಿ 4 ದಿನಗಳ ಟೆಸ್ಟ್ ಪಂದ್ಯವನ್ನಾಡಲಿದ್ದು ಈ ಪಂದ್ಯದಲ್ಲೂ ಆಡಲು ಕೊಹ್ಲಿ ಚಿಂತನೆ ನಡೆಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. 

ಜು.16ರಿಂದ ಪಂದ್ಯ ಆರಂಭಗೊಳ್ಳಲಿದ್ದು, ಭಾರತ ತಂಡ ಇಂಗ್ಲೆಂಡ್ ವಿರುದ್ಧ ತನ್ನ ಅಂತಿಮ ಏಕದಿನ ಪಂದ್ಯವನ್ನು ಜು.17ರಂದು ಆಡಲಿದೆ. ಹೀಗಾಗಿ ಭಾರತ ‘ಎ’ ತಂಡವನ್ನು ಜು.19ಕ್ಕೆ ಮುಂದೂಡಲು ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಲಿದೆ ಎನ್ನಲಾಗಿದೆ.

loader