ಬ್ಯಾಟಿಂಗ್‌ನಲ್ಲಿ ಭುವಿಗಿಂತ ಹಿಂದಿದ್ದಾರೆ ವಿರಾಟ್ ಕೊಹ್ಲಿ!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 30, Jul 2018, 9:47 PM IST
Virat Kohli Is Behind Bhuvneshwar Kumar In Batting Record In England
Highlights

ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ . ಆದರೆ ಇಂಗ್ಲೆಂಡ್ ನೆಲದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡಿಲ್ಲ. ಆಂಗ್ಲರ ನೆಲದಲ್ಲಿ ವಿರಾಟ್ ಕೊಹ್ಲಿಗಿಂತ ,  ವೇಗಿ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.ಇಲ್ಲಿದೆ ಆಂಗ್ಲರ ನೆಲದಲ್ಲಿನ ಭಾರತದ ಬೆಸ್ಟ್ ಬ್ಯಾಟ್ಸ್‌ಮನ್ ವಿವರ.

ಲಂಡನ್(ಜು.30): ಭಾರತದಲ್ಲಾಗಲಿ, ವಿದೇಶದಲ್ಲಾಗಲಿ ವಿರಾಟ್ ಕೊಹ್ಲಿ ಬೆಸ್ಟ್ ಬ್ಯಾಟ್ಸ್‌ಮನ್. ಯಾವುದೇ ಮಾದರಿ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಎರಡು ಮಾತಿಲ್ಲ.  ಕೊಹ್ಲಿಗೆ ಬೌಲಿಂಗ್ ಮಾಡೋದೇ ಸವಾಲಿನ ಪ್ರಶ್ನೆ. ಆದರೆ ಇಂಗ್ಲೆಂಡ್ ನೆಲದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಅಷ್ಟಕಷ್ಟೇ. 

ಇಂಗ್ಲೆಂಡ್ ನೆಲದಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ, ವೇಗಿ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿನ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿ. ಈ ಅಂಕಿ ಅಂಶಗಳ ಪ್ರಕಾರ, ಕೊಹ್ಲಿಗಿಂತ ಭುವಿ ಬೆಸ್ಟ್ ಬ್ಯಾಟ್ಸ್‌ಮನ್.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ 13.40 ಸರಾಸರಿಯಲ್ಲಿ 134 ರನ್ ಸಿಡಿಸಿದ್ದಾರೆ. ಆದರೆ ಭುವನೇಶ್ವರ್ ಕುಮಾರ್ 27.44ರ ಸರಾಸರಿಯಲ್ಲಿ 247 ರನ್ ಸಿಡಿಸಿದ್ದಾರೆ. ಜೊತೆಗೆ 3 ಅರ್ಧಶತಗಳನ್ನೂ ದಾಖಲಿಸಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿಗಿಂತ, ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. 2011ರ ಇಂಗ್ಲೆಂಡ್ ಪ್ರವಾಸದಲ್ಲಿ ಅಮಿತ್ ಮಿಶ್ರಾ, 2 ಟೆಸ್ಟ್ ಪಂದ್ಯಗಳಿಂದ 38.25ರ ಸರಾಸರಿಯಲ್ಲಿ 153 ರನ್ ಸಿಡಿಸಿದ್ದಾರೆ. ಜೊತೆಗೆ 2 ಅರ್ಧಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್ ಹೊರತು ಪಡಿಸಿದರೆ, ಆಸ್ಟ್ರೇಲಿಯಾ, ಸೌತ್ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪಿಚ್‌ಗಳಲ್ಲಿ ವಿರಾಟ್ ಕೊಹ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ 8 ಪಂದ್ಯಗಳಲ್ಲಿ ಕೊಹ್ಲಿ 992 ರನ್ ಸಿಡಿಸಿದ್ದಾರೆ. ಸೌತ್ಆಫ್ರಿಕಾ ನೆಲದಲ್ಲಿ ಕೊಹ್ಲಿ 5 ಟೆಸ್ಟ್ ಪಂದ್ಯಗಳಿಂದ 558 ರನ್ ಸಿಡಿಸಿದ್ದಾರೆ. ನ್ಯೂಜಿಲೆಂಡ್ ಪಿಚ್‌ಗಳಲ್ಲಿ ಕೊಹ್ಲಿ 2 ಟೆಸ್ಟ್ ಪಂದ್ಯಗಳಿಂದ 214 ರನ್ ಬಾರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಕೊಹ್ಲಿ ಅಂಕಿ ಅಂಶಗಳನ್ನ ಉತ್ತಮ ಪಡಿಸಿಕೊಳ್ಳಲು ಇದೀಗ ಸುವರ್ಣ ಅವಕಾಶ ಕೊಹ್ಲಿ ಮುಂದಿದೆ. ಕಳೆದ ಪ್ರವಾಸ ವೈಫಲ್ಯಕ್ಕೆ ತಕ್ಕ ಉತ್ತರ ನೀಡಲು ವಿರಾಟ್ ಸಜ್ಜಾಗಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಈ ಬಾರಿ ಕೊಹ್ಲಿ ಯಶಸ್ಸು ಸಾಧಿಸುತ್ತಾರ ಅನ್ನೋ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.
 

loader