‘ವಿರಾಟ್‌ ನನ್ನಂತೆಯೇ ಸದಾ ಆಕ್ರಮಣಕಾರಿಯಾಗಿ ವರ್ತಿಸಲು ಇಚ್ಛಿಸುತ್ತಾರೆ. ಆಟದಂಗಳದಲ್ಲಿ ಇದು ಅಗತ್ಯವಾಗಿದೆ. ಶಿಸ್ತು ಮತ್ತು ಆಕ್ರಮಣಕಾರಿ ವರ್ತನೆ ಇವೆಲ್ಲವೂ ಆಟಕ್ಕೆ ಬಹಳ ಮುಖ್ಯವಾಗಿವೆ. - ಮ್ಯಾಥ್ಯೂ ಹೇಡನ್‌

ನವದೆಹಲಿ(ಮಾ.14): ಡಿಆರ್‌'ಎಸ್‌ ವಿವಾದದಲ್ಲಿ ವಿರಾಟ್‌ ಕೊಹ್ಲಿ ವರ್ತನೆ ಕಂಡು ಅವರ ಮೇಲಿರುವ ಗೌರವ ಕಡಿಮೆಯಾಗುತ್ತಿದೆ ಎಂದು ಆಸ್ಪ್ರೇಲಿಯಾ ಮಾಜಿ ಆಟಗಾರ ಇಯಾನ್‌ ಹೀಲಿ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಲಿ ಹೇಳಿಕೆಗೆ ಪ್ರತ್ಯುತ್ತರವಾಗಿ ವಿರಾಟ್‌, ನಮ್ಮ ದೇಶದಲ್ಲಿ 120 ಕೋಟಿ ಜನರಿದ್ದಾರೆ. ಒಬ್ಬ ಮನುಷ್ಯ ನನ್ನನ್ನು ಇಷ್ಟಪಡದಿದ್ದರೆ ಅದರಿಂದ ಏನು ನಷ್ಟವಿಲ್ಲ ಎಂದು ತಿರುಗೇಟು ನೀಡಿದ್ದರು.

ಈ ವಿವಾದದ ಕುರಿತಂತೆ ಆಸೀಸ್‌ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್‌ ಕೊಹ್ಲಿಯ ಪರ ಬ್ಯಾಟಿಂಗ್‌ ಮಾಡಿದ್ದಾರೆ. ‘ವಿರಾಟ್‌ ನನ್ನಂತೆಯೇ ಸದಾ ಆಕ್ರಮಣಕಾರಿಯಾಗಿ ವರ್ತಿಸಲು ಇಚ್ಛಿಸುತ್ತಾರೆ. ಆಟದಂಗಳದಲ್ಲಿ ಇದು ಅಗತ್ಯವಾಗಿದೆ. ಶಿಸ್ತು ಮತ್ತು ಆಕ್ರಮಣಕಾರಿ ವರ್ತನೆ ಇವೆಲ್ಲವೂ ಆಟಕ್ಕೆ ಬಹಳ ಮುಖ್ಯವಾಗಿವೆ ಎಂದು ಹೇಡನ್‌ ಹೇಳಿದ್ದಾರೆ. 

ಭಾರತೀಯ ಕ್ರಿಕೆಟಿಗರು ಸ್ಥಳೀಯ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಹಾಗೂ ಗೌರವವನ್ನು ಪಡೆಯುತ್ತಾರೆ ಎಂದು ಮಾಜಿ ಎಡಗೈ ಬ್ಯಾಟ್ಸ್'ಮನ್ ಅಭಿಪ್ರಾಯಪಟ್ಟಿದ್ದಾರೆ.

ಹೇಡನ್'ಗಿಂತ ಮೊದಲು ಆಸೀಸ್ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಕೂಡ ಕೊಹ್ಲಿ ಪರ ಬ್ಯಾಟಿಂಗ್ ಮಾಡಿದ್ದರು.