ಭೋಜನ ವಿರಾಮಕ್ಕೂ ಮುನ್ನ ಕೊಹ್ಲಿ ತೆಗೆದುಕೊಂಡ ಡಿಆರ್'ಎಸ್ ತೀರ್ಮಾನ ಆಸ್ಟ್ರೇಲಿಯಾ ತಂಡದ ಮೂರನೇ ವಿಕೆಟ್ ಪತನಕ್ಕೆ ಕಾರಣವಾಯಿತು.
ರಾಂಚಿ(ಮಾ.16): ನಾಯಕ ವಿರಾಟ್ ಕೊಹ್ಲಿಯ ಸೂಕ್ಷ್ಮಗ್ರಹಿಕೆಯಿಂದ ತೆಗೆದುಕೊಂಡ ಡಿಆರ್'ಎಸ್ ನಿರ್ಧಾರ ಟೀಂ ಇಂಡಿಯಾ ಪಾಲಿಗೆ ವರವಾಗಿ ಪರಿಣಮಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಿಸಿಕೊಂಡಿದೆ. ಭೋಜನ ವಿರಾಮಕ್ಕೂ ಮುನ್ನ ಕೊಹ್ಲಿ ತೆಗೆದುಕೊಂಡ ಡಿಆರ್'ಎಸ್ ತೀರ್ಮಾನ ಆಸ್ಟ್ರೇಲಿಯಾ ತಂಡದ ಮೂರನೇ ವಿಕೆಟ್ ಪತನಕ್ಕೆ ಕಾರಣವಾಯಿತು.
ಅಶ್ವಿನ್ ಎಸೆದ ಪಂದ್ಯದ 26ನೇ ಓವರ್'ನ ಮೊದಲ ಎಸೆತವು ಶಾನ್ ಮಾರ್ಶ್ ಬ್ಯಾಟ್ ಸವರಿ ಪ್ಯಾಡ್'ಗೆ ಮುತ್ತಿಕ್ಕಿದ್ದ ಚೆಂಡನ್ನು ಚೇತೇಶ್ವರ್ ಪೂಜಾರ ಅದ್ಭುತ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಕ್ಯಾಚ್'ಗೆ ಮನವಿ ಮಾಡಿದರೂ ಅಂಪೈರ್ ಅದನ್ನು ಪುರಸ್ಕರಿಸಲಿಲ್ಲ. ಆಗ ಕೊಹ್ಲಿ ಡಿಆರ್'ಎಸ್ ತೆಗೆದುಕೊಂಡರು...
ಹೀಗಿತ್ತು ಆ ಕ್ಷಣ...
