‘ಶಾಹೀದ್ ಅಫ್ರಿದಿ ಫೌಂಡೇಶನ್‌ಗೆ ಬೆಂಬಲ ನೀಡಿರುವುದಕ್ಕೆ ವಿರಾಟ್ ಕೊಹ್ಲಿ ನಿಮಗೆ ಅಭಿನಂದನೆಗಳು. ನಿಮ್ಮಂತಹವರ ನಿರಂತರ ಬೆಂಬಲ ನಮಗೆ ಲಭ್ಯವಾಗಲಿದೆ ಎನ್ನುವ ನಂಬಿಕೆಯಿದೆ’ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ

ಕರಾಚಿ(ಆ.02): ತಮ್ಮ ಫೌಂಡೇಶನ್‌ಗೆ ಬ್ಯಾಟ್ ಅನ್ನು ಕೊಡುಗೆಯಾಗಿ ನೀಡಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅಭಿನಂದನೆ ಸಲ್ಲಿಸಿದ್ದಾರೆ.

‘ಶಾಹೀದ್ ಅಫ್ರಿದಿ ಫೌಂಡೇಶನ್‌ಗೆ ಬೆಂಬಲ ನೀಡಿರುವುದಕ್ಕೆ ವಿರಾಟ್ ಕೊಹ್ಲಿ ನಿಮಗೆ ಅಭಿನಂದನೆಗಳು. ನಿಮ್ಮಂತಹವರ ನಿರಂತರ ಬೆಂಬಲ ನಮಗೆ ಲಭ್ಯವಾಗಲಿದೆ ಎನ್ನುವ ನಂಬಿಕೆಯಿದೆ’ ಎಂದು ಟ್ವೀಟ್ ಮಾಡಿರುವ ಅಫ್ರಿದಿ, ವಿರಾಟ್ ನೀಡಿರುವ ಬ್ಯಾಟ್‌ನ ಫೋಟೋವನ್ನೂ ಅಪ್‌ಲೋಡ್ ಮಾಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಸಂದರ್ಭದಲ್ಲಿ ಭಾರತ ತಂಡದ ಆಟಗಾರರೆಲ್ಲ ಒಗ್ಗೂಡಿ ತಮ್ಮ ಸಹಿ ಇರುವ ಕೊಹ್ಲಿ ಟೀ-ಶರ್ಟ್‌ವೊಂದನ್ನು ಅವರಿಗೆ ಕಾಣಿಕೆಯಾಗಿ ನೀಡಿದ್ದರು. ಲಂಡನ್‌ನಲ್ಲಿ 3 ಲಕ್ಷ ರೂ.ಗೆ ಈ ಟೀ ಶರ್ಟ್ ಹರಾಜಾಗಿತ್ತು.