ನಾಗ್ಪುರ'ದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್'ನ 3ನೇ ದಿನದಲ್ಲಿ ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ನಾಗ್ಪುರ(ನ.26): ವಿರಾಟ್ ಕೊಹ್ಲಿ ಕ್ರಿಕೆಟ್'ನಲ್ಲಿ ದಾಖಲೆ ಬರೆಯಲೆಂದೆ ಹುಟ್ಟಿರುವಂತಿದೆ. ಪ್ರಸ್ತುತ ಸಂದರ್ಭದಲ್ಲಿ ಭಾರತದ ಈ ಬ್ಯಾಟಿಂಗ್ ಮಾಂತ್ರಿಕನನ್ನು ನಿಯಂತ್ರಿಸಲು ಎದುರಾಳಿ ತಂಡಕ್ಕೆ ಸಾಧ್ಯವಿಲ್ಲದಂತೆ ಕಾಣುತ್ತಿದೆ.

ನಾಗ್ಪುರ'ದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್'ನ 3ನೇ ದಿನದಲ್ಲಿ ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಗವಾಸ್ಕರ್ ದಾಖಲೆಹಿಂದಕ್ಕೆ

ಭಾರತ ತಂಡದ ನಾಯಕನಾದ ಬಳಿಕ ಟೆಸ್ಟ್ನಲ್ಲಿ ಕೊಹ್ಲಿಗೆ 12ನೇ ಶತಕ. ಇದರೊಂದಿಗೆ ಅತಿಹೆಚ್ಚು ಶತಕ ಬಾರಿಸಿದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೇರಿದರು. ನಾಯಕರಾಗಿ ಸುನಿಲ್ ಗವಾಸ್ಕರ್ 11 ಶತಕ ದಾಖಲಿಸಿದ್ದರು. ಕೊಹ್ಲಿ ೧೨ ಶತಕ ಬಾರಿಸಿದ್ದಾರೆ.ಇದಕ್ಕೆ ಕೊಹ್ಲಿ ತೆಗೆದುಕೊಂಡಿದ್ದು ಕೇವಲ 49 ಇನ್ನಿಂಗ್ಸ್'ಗಳು.

ಲಾರಾ ದಾಖಲೆಗೆ ಸಮನಾಗಿದೆ

ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ 5ನೇ ದ್ವಿಶತಕ ಬಾರಿಸಿದ ಕೊಹ್ಲಿ, ಅತಿಹೆಚ್ಚು ದ್ವಿಶತಕ ಬಾರಿಸಿದ ನಾಯಕರ ಸಾಲಿನಲ್ಲಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಈ ಮೊದಲು ವೆಸ್ಟ್ಇಂಡೀಸ್ ನಾಯಕರಾಗಿದ್ದ ಬ್ರಿಯಾನ್ ಲಾರಾ 5 ದ್ವಿಶತಕ ಬಾರಿಸಿದ್ದರು. ಡಾನ್ ಬ್ರಾಡ್ಮನ್, ಗ್ರೇಮ್ ಸ್ಮಿತ್ ಹಾಗೂ ಮೈಕಲ್ ಕ್ಲಾರ್ಕ್ ನಾಯಕರಾಗಿ ತಲಾ ೪ ದ್ವಿಶತಕ ಬಾರಿಸಿದ್ದರು. ಈ ಮೂವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ಈ ವರ್ಷ 10 ಶತಕ

2017ರ ವರ್ಷದಲ್ಲಿ ವಿರಾಟ್ 10 ಶತಕ ಬಾರಿಸಿದ್ದಾರೆ. ಒಂದು ವರ್ಷದಲ್ಲಿ 10 ಶತಕ ಬಾರಿಸಿದ ಮೊದಲ ಬ್ಯಾಟ್ಸ್'ಮೆನ್ ಎಂಬ ಕೀರ್ತಿ ಕೊಹ್ಲಿ ಪಾಲಾಗಿದೆ.