ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 30ನೇ ಶತಕ ಸಿಡಿಸುವ ಮೂಲಕ ಆಸೀಸ್ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದರು. ನಾಯಕನಾಗಿ ಅತಿ ವೇಗವಾಗಿ ಒಂದು ಸಾವಿರ ರನ್ ಕಲೆಹಾಕಿದ ದಾಖಲೆ ಹೊಂದಿರುವ ವಿರಾಟ್, ಇದೀಗ ಅತಿವೇಗವಾಗಿ 2 ಸಾವಿರ ರನ್ ಪೂರೈಸುವ ಹೊಸ್ತಿಲಲ್ಲಿದ್ದಾರೆ.
ಇಂದೋರ್(ಸೆ.24): ವಿರಾಟ್ ನಾಯಕತ್ವದ ಜತೆಗೆ ಬ್ಯಾಟಿಂಗ್’ನಲ್ಲೂ ಅನೇಕ ದಾಖಲೆಗಳನ್ನು ಬರೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 30ನೇ ಶತಕ ಸಿಡಿಸುವ ಮೂಲಕ ಆಸೀಸ್ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದರು. ನಾಯಕನಾಗಿ ಅತಿ ವೇಗವಾಗಿ ಒಂದು ಸಾವಿರ ರನ್ ಕಲೆಹಾಕಿದ ದಾಖಲೆ ಹೊಂದಿರುವ ವಿರಾಟ್, ಇದೀಗ ಅತಿವೇಗವಾಗಿ 2 ಸಾವಿರ ರನ್ ಪೂರೈಸುವ ಹೊಸ್ತಿಲಲ್ಲಿದ್ದಾರೆ.
ಎಬಿ ಡಿವಿಲಿಯರ್ಸ್ ದಾಖಲೆ ಮುರಿಯಲು ಕೊಹ್ಲಿಗೆ ಇನ್ನು ಕೇವಲ 41 ರನ್’ಗಳ ಅವಶ್ಯಕತೆಯಿದ್ದು, ಇನ್ನೂ 6 ಪಂದ್ಯಗಳ ಕಾಲಾವಕಾಶವಿದೆ. ಆದರೆ ಇಂದೇ ದಾಖಲೆ ನಿರ್ಮಿಸಲಿದ್ದಾರೆ ಎನ್ನುವುದು ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರ.