ಅಪರ್ಟ್'ಮೆಮಟ್'ನ 40ನೇ ಮಹಡಿಯಲ್ಲಿನ ಒಂದು ಫ್ಲಾಟ್ ಇಷ್ಟವಾದ ಕಾರಣ ನೂತನ ಫ್ಲಾಟ್'ಅನ್ನು ಕ್ಯಾನ್ಸ'ಲ್ ಮಾಡಿದ್ದಾರೆ.
ಮುಂಬೈ(ಮಾ.23): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಮುಂಬೈನ ಟೋನಿ ವಾರ್ಲಿ ಪ್ರದೇಶದಲ್ಲಿ 34 ಕೋಟಿ ರೂ ನೀಡಿ 35ನೇ ಮಹಡಿಯಲ್ಲಿ 7117 ಚದರಡಿಯ ಬುಕ್ ಮಾಡಿದ್ದ ವಿಲಾಸಿ ಫ್ಲಾಟ್ ಓಂಕಾರ್ 1973 ಅನ್ನು ಕ್ಯಾನ್ಸ್'ಲ್ ಮಾಡಿದ್ದಾರೆ.
ಕೆಲವು ತಿಂಗಳ ಹಿಂದಷ್ಟೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ವಿವಾಹವಾದ ನಂತರ ದಂಪತಿಗೆ ಡಾ. ಅನ್ನೆ ಬಸಂತ್ ರಸ್ತೆಯಲ್ಲಿ ರಹೇಜಾ ಗ್ರೂಪಿನ ಸಮುದ್ರ ದಂಡೆಯ ಮೇಲಿರುವ ಅಪರ್ಟ್'ಮೆಮಟ್'ನ 40ನೇ ಮಹಡಿಯಲ್ಲಿನ ಒಂದು ಫ್ಲಾಟ್ ಇಷ್ಟವಾದ ಕಾರಣ ನೂತನ ಫ್ಲಾಟ್'ಅನ್ನು ಕ್ಯಾನ್ಸ'ಲ್ ಮಾಡಿದ್ದಾರೆ. ರಹೇಜಾ ಫ್ಲಾಟ್ ಮಾಸಿಕ ಬಾಡಿಗೆ 15 ಲಕ್ಷ ರೂ. ವಿರುಷ್ಕಾ 2017ರ ಡಿಸೆಂಬರ್'ನಲ್ಲಿ ಮದುವೆಯಾಗಿದ್ದರು.
