ವಿರಾಟ್ ಇತ್ತೀಚೆಗಷ್ಟೇ ವಿರಾಟ್ ಏಕದಿನ ಕ್ರಿಕೆಟ್'ನಲ್ಲಿ 30ನೇ ಶತಕ ದಾಖಲಿಸುವುದರೊಂದಿಗೆ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ್ದಾರೆ,

ನವದೆಹಲಿ(ಸೆ.18): ವೃತ್ತಿಜೀವನ ಅಂತ್ಯಗೊಳ್ಳುವಷ್ಟರಲ್ಲಿ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌'ರ ಬಹುತೇಕ ದಾಖಲೆ ಗಳನ್ನು ಮುರಿಯಲಿದ್ದಾರೆ ಎನ್ನುವ ನಂಬಿಕೆ ನನಗಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಕೊಹ್ಲಿಗೀಗ 28 ವರ್ಷ. ಇನ್ನೂ 10 ವರ್ಷಗಳ ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯ ಅವರಿಗಿದೆ. ಅಷ್ಟರಲ್ಲಿ ಸಚಿನ್ ದಾಖಲೆಗಳನ್ನು ವಿರಾಟ್ ಪುಟಿಗಟ್ಟಲಿದ್ದಾರೆ. ಮತ್ತೊಬ್ಬ ಸಚಿನ್ ತೆಂಡುಲ್ಕರ್ ಸೃಷ್ಟಿಯಾಗುತ್ತಾರೆ ಎಂದು ನಾವು ಯೋಚಿಸಿರಲಿಲ್ಲ. ಆದರೆ ನಮ್ಮ ಊಹೆಯನ್ನು ಮೀರಿ ವಿರಾಟ್ ಬೆಳೆಯುತ್ತಿದ್ದಾರೆ ಎಂದು ವೀರೂ ಡೆಲ್ಲಿ ಕ್ರಿಕೆಟಿಗನ ಗುಣಗಾನ ಮಾಡಿದ್ದಾರೆ.

ವಿರಾಟ್ ಇತ್ತೀಚೆಗಷ್ಟೇ ವಿರಾಟ್ ಏಕದಿನ ಕ್ರಿಕೆಟ್'ನಲ್ಲಿ 30ನೇ ಶತಕ ದಾಖಲಿಸುವುದರೊಂದಿಗೆ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ್ದಾರೆ, ಅಲ್ಲದೇ ಜಂಟಿ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. 49 ಶತಕ ಬಾರಿಸಿರುವ ಸಚಿನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.