ಟ್ರಿನಿಡಾಡ್(ಆ.12): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ, ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಹಾಗೂ ಭುವನೇಶ್ವರ್ ಕುಮಾರ್ ಬೌಲಿಂಗ್  ದಾಳಿಯಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ  ವಿರಾಟ್ ಕೊಹ್ಲಿ ಹಲವು ದಿಗ್ಗಜರ ದಾಖಲೆಯನ್ನು ಪುಡಿ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಇದೀಗ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. 

ಇದನ್ನೂ ಓದಿ:  INDvWI 2ನೇ ಏಕದಿನ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ!

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 42ನೇ ಶತಕ ಪೂರೈಸಿದ್ದಾರೆ. 120 ರನ್ ಸಿಡಿಸೋ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 11406 ರನ್ ಪೂರೈಸಿದರು.  ಸೌರವ್ ಗಂಗೂಲಿ ಏಕದಿನ ಕ್ರಿಕೆಟ್‌ನ 311 ಪಂದ್ಯಗಳಿಂದ 11363 ರನ್ ಸಿಡಿಸಿದ್ದಾರೆ. ಕೊಹ್ಲಿ ಇದೀಗ 238 ಪಂದ್ಯಗಳಲ್ಲಿ ಗಂಗೂಲಿ ದಾಖಲೆ ಮುರಿದಿದ್ದಾರೆ. ವಿಂಡೀಸ್ ವಿರುದ್ಧ ಅಬ್ಬರಿಸಿದ ಕೊಹ್ಲಿ, ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹಾಗೂ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ದಾಖಲೆನ್ನೂ ಮುರಿದಿದ್ದಾರೆ.

ಇದನ್ನೂ ಓದಿ:  ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗನ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಪೈಕಿ ವಿರಾಟ್ ಕೊಹ್ಲಿ 8ನೇ ಸ್ಥಾನ ಅಲಂಕರಿಸಿದ್ದಾರೆ.  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಸಾಧಕರು:

ಬ್ಯಾಟ್ಸ್‌ಮನ್

ರನ್ ಪಂದ್ಯ
ಸಚಿನ್ ತೆಂಡುಲ್ಕರ್ 18426 463
ಕುಮಾರ ಸಂಗಕ್ಕಾರ 14234 404
ರಿಕಿ ಪಾಂಟಿಂಗ್ 13704 375
ಸನತ್ ಜಯಸೂರ್ಯ 13430 445
ಮಹೇಲಾ ಜಯವರ್ದನೆ 12650 448
ಇನ್ಜಮಾನ್ ಉಲ್ ಹಕ್ 11739 378
ಜ್ಯಾಕ್ ಕಾಲಿಸ್ 11579 328
ವಿರಾಟ್ ಕೊಹ್ಲಿ 11406 238
ಸೌರವ್ ಗಂಗೂಲಿ 11363 311
ರಾಹುಲ್ ದ್ರಾವಿಡ್ 10889 344