ಟ್ರಿನಿಡಾಡ್(ಆ.11): ವೆಸ್ಟ್ ಇಂಡೀಸ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. 112 ಎಸೆತದಲ್ಲಿ ಕೊಹ್ಲಿ ಶತಕ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 42 ಶತಕ ದಾಖಲಿಸಿದರು. ವಿಂಡೀಸ್ ವಿರುದ್ದ 8 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆನ್ನು ಮುರಿದಿದ್ದಾರೆ. 

ಇದನ್ನೂ ಓದಿ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗನ ದಾಖಲೆ ಮುರಿದ ವಿರಾಟ್ ಕೊಹ್ಲಿ!

ನಾಯಕನಾಗಿ ಒಂದು ತಂಡ ವಿರುದ್ಧ ಗರಿಷ್ಠ ಸೆಂಚುರಿ ಸಿಡಿಸಿದ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ದಾಖಲೆನ್ನು ಮುರಿದ ಕೊಹ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ನಾಯಕನಾಗಿ ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ 6 ಶತಕ ಸಿಡಿಸಿದ್ದಾರೆ. ರಿಕಿ ಪಾಂಟಿಂಗ್ ನಾಯಕನಾಗಿ ನ್ಯೂಜಿಲೆಂಡ್ ವಿರುದ್ದ 5 ಶತಕ ಬಾರಿಸಿದ್ದಾರೆ. 

ಇದನ್ನೂ ಓದಿ: ಭಾರತದಲ್ಲಿ ಜನಿಸಿ ವಿದೇಶದಲ್ಲಿ ಸಕ್ಸಸ್ ಆದ ಟಾಪ್ 5 ಕ್ರಿಕೆಟಿಗರಿವರು

ನಾಯಕನಾಗಿ ಒಂದು ತಂಡದ ವಿರುದ್ಧ ಗರಿಷ್ಠ ಶತಕ ಸಾಧನೆ
6 ಶತಕ - ಕೊಹ್ಲಿ vs ವೆಸ್ಟ್ ಇಂಡೀಸ್
5 ಶತಕ - ಪಾಂಟಿಂಗ್  vs ನ್ಯೂಜಿಲೆಂಡ್
4 ಶತಕ-  ಪಾಂಟಿಂಗ್ vs ಇಂಗ್ಲೆಂಡ್
4 ಶತಕ  ಪಾಟಿಂಗ್ vs ಭಾರತ
4 ಶತಕ - ಡಿವಿಲಿಯರ್ಸ್  vs ಭಾರತ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಹಲವು ಸಾಧನೆಗೆ ಮುನ್ನುಡಿ ಬರೆದಿದೆ.

ಒಂದು ತಂಡದ ವಿರುದ್ಧ  ಗರಿಷ್ಠ ಸೆಂಚುರಿ ಸಾಧನೆ
9 ಶತಕ - ಸಚಿನ್ ತೆಂಡುಲ್ಕರ್ vs ಆಸ್ಟ್ರೇಲಿಯಾ
8 ಶತಕ - ಸಚಿನ್ ತೆಂಡುಲ್ಕರ್ vs ಶ್ರೀಲಂಕಾ
8 ಶತಕ- ವಿರಾಟ್ ಕೊಹ್ಲಿ vs ಶ್ರೀಲಂಕಾ
8 ಶತಕ- ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ
8 ಶತಕ- ವಿರಾಟ್ ಕೊಹ್ಲಿ vs ವೆಸ್ಟ್  ಇಂಡೀಸ್

ಕೊಹ್ಲಿ ಶತಕ(ಇತರರ ನಾಯಕತ್ವದಡಿಯಲ್ಲಿ) 
ತನ್ನ(ಕೊಹ್ಲಿ) ನಾಯಕತ್ವದಡಿಯಲ್ಲಿ- 20 ಶತಕ
ಧೋನಿ ನಾಯಕತ್ವದಡಿಯಲ್ಲಿ - 19 ಶತಕ 
ಸೆಹ್ವಾಗ್ ನಾಯಕತ್ವದಡಿಯಲ್ಲಿ - 02 ಶತಕ 
ಗಂಭೀರ್ ನಾಯಕತ್ವದಡಿಯಲ್ಲಿ - 01 ಶತಕ