ಅಶ್ವಿನ್-ಜಡೇಜಾ ಅನುಪಸ್ಥಿತಿಯಲ್ಲಿ ಯುವ ಸ್ಪಿನ್ನರ್'ಗಳಾದ ಯುಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್ ಅದ್ಭುತ ಪ್ರದರ್ಶನ ತೋರುತ್ತಿರುವುದು ಹಿರಿಯ ಸ್ಪಿನ್ನರ್ ಟೀಂ ಇಂಡಿಯಾ ಪ್ರವೇಶದ ಹಾದಿ ಕಠಿಣವಾಗಿದೆ ಎನ್ನಲಾಗುತ್ತಿದೆ.
ಮುಂಬೈ(ಅ.22): ಹಿರಿಯ ಸ್ಪಿನ್ನರ್'ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾಗೆ ‘ವಿಶ್ರಾಂತಿ’ ನೀಡಿದ್ದೇವೆ ಅವರಿಗೆ ಕೊಕ್ ನೀಡಿಲ್ಲ ಎನ್ನುವ ಬಿಸಿಸಿಐ ವಾದವನ್ನು ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.
‘ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲು ಸಾಮರ್ಥ್ಯವಿರುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುತ್ತಿದ್ದೇವೆ. 2019ರ ವಿಶ್ವಕಪ್'ಗೆ ಅತ್ಯುತ್ತಮ ಸಂಯೋಜನೆ ರಚಿಸುವ ದೃಷ್ಟಿಯಿಂದ ಈ ರೀತಿಯ ಪ್ರಯೋಗಗಳು ತುಂಬಾ ಮುಖ್ಯ. ಅಶ್ವಿನ್ ಹಾಗೂ ಜಡೇಜಾ ಕಳೆದ 6-7 ವರ್ಷಗಳಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯವಿದೆ’ ಎಂದು ಕೊಹ್ಲಿ ಹೇಳಿದ್ದಾರೆ.
ಅಶ್ವಿನ್-ಜಡೇಜಾ ಅನುಪಸ್ಥಿತಿಯಲ್ಲಿ ಯುವ ಸ್ಪಿನ್ನರ್'ಗಳಾದ ಯುಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್ ಅದ್ಭುತ ಪ್ರದರ್ಶನ ತೋರುತ್ತಿರುವುದು ಹಿರಿಯ ಸ್ಪಿನ್ನರ್ ಟೀಂ ಇಂಡಿಯಾ ಪ್ರವೇಶದ ಹಾದಿ ಕಠಿಣವಾಗಿದೆ ಎನ್ನಲಾಗುತ್ತಿದೆ.