Asianet Suvarna News Asianet Suvarna News

ನಾಯಕನಾದ್ಮೇಲೆ ವಿರಾಟ್​​ ಆಟ ಹೇಗಿದೆ ? ಏನು ಹೇಳುತ್ತೆ ವಿರಾಟ್​​ ಟೆಸ್ಟ್ ಅಂಕಿ-ಅಂಶ ?

virat kohli batting

ಕೊಲ್ಕತ್ತಾ(ಅ.03): ವಿರಾಟ್​​ ಕೊಹ್ಲಿ ಓರ್ವ ಅದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಡೌಟಿಲ್ಲ. ಟೆಸ್ಟ್​​​ ತಂಡದ ನಾಯಕನಾಗೋಕು ಮುಂಚೆ ಕೊಹ್ಲಿ ಆಟ ಹೇಗಿತ್ತು. ಕ್ಯಾಪ್ಟನ್​ ಆದ್ಮೇಲೆ ವಿರಾಟ್​​ ಆಟ ಹೇಗಿದೆ ಅನ್ನೋದನ್ನ ಅಂಕಿ ಆಂಶ ಇಲ್ಲಿದೆ. 

ವಿರಾಟ್​​ ಕೊಹ್ಲಿ ಅಂತಿದ್ದಾಗೆಯೇ ಅಬ್ಬರದ ಬ್ಯಾಟಿಂಗ್​​ ಎಲ್ಲರ ಕಣ್ಮುಂದೆ ಬರುತ್ತೆ. ಯಾಕಂದರೆ, ಡೆಲ್ಲಿ ಹುಡುಗನ ಡೇರಿಂಗ್​​ ಆಟ ಆಗಿದೆ. ಆದರೆ, ಕಳೆದ 4 ಇನ್ನಿಂಗ್ಸ್​​ ನೋಡಿರೋ ಎಲ್ಲರಿಗೂ ಒಂದು ಚಿಂತೆ ಶುರುವಾಗಿದೆ. ಯಾಕೆಂದರೆ ಕೊಹ್ಲಿ ನ್ಯೂಜಿಲೆಂಡ್​ ವಿರುದ್ಧದ 4 ಇನ್ನಿಂಗ್ಸ್​​ನಲ್ಲಿಯೂ ಒಂದೇ ಒಂದು ಅರ್ಧಶತಕ ದಾಖಲಿಸಿಲ್ಲ. ಅಷ್ಟೆ ಯಾಕೆ ಒಟ್ಟಾರೆಯಾಗಿ 100 ರನ್​ ಗಡಿ ದಾಟಿಲ್ಲ.

ಕೊಹ್ಲಿ ನಾಯಕನಾಗಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರಾ ಅನ್ನೋದು. ವಿರಾಟ್​​ ಸಾಲು ಸಾಲು ಸರಣಿಗಳನ್ನು ಗೆಲ್ಲಿಸಿಕೊಡ್ತಿರಬಹುದು. ಆದರೆ, ವೈಯಕ್ತಿಕ ಆಟ ಕೂಡ ಅಷ್ಟೇ ಮುಖ್ಯವಾಗಿರುತ್ತೆ. ಹೀಗಾಗಿ ಕೊಹ್ಲಿ ವೈಯಕ್ತಿಕ ಆಟ ಏನಾಗಿದೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ. ಇದಕ್ಕೆ ಇರೋ ಒಂದೇ ಒಂದು ಪರಿಹಾರ ಅಂದ್ರೆ, ಅಂಕಿ ಅಂಶಗಳನ್ನ ನೋಡೋದು.

ಏನು ಹೇಳುತ್ತೆ ವಿರಾಟ್​​ ಅಂಕಿಅಂಶ..?
ನಾಯಕನಾಗಿ ತಂಡವನ್ನು ಮುನ್ನಡೆಸುವದರ ಜೊತೆಗೆ ವೈಯಕ್ತಿಕವಾಗಿಯೂ ತನ್ನ ಆಟವನ್ನು ಉಳಿಸಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬ ನಾಯಕನಿಗೂ ಇರುತ್ತೆ. ಆಗಷ್ಟೇ ಓರ್ವ ನಾಯಕ ಸಕ್ಸಸ್​​ ಎನಿಸಿಕೊಳ್ಳದು. ಹೀಗೆ ಸಕ್ಸಸ್​​​ ಕಂಡವರು ತುಂಬಾನೇ ವಿರಳ. ಈ ಸಾಲಿನಲ್ಲಿ ವಿರಾಟ್​​​ ನಿಲ್ತಾರಾ ಅನ್ನೋದನ್ನ ಈಗಲೇ ಹೇಳೊದಿಕ್ಕೆ ಆಗೋಲ್ಲ. ಆದರೆ, ಅಂಕಿ ಅಂಶಗಳು ಅವ್ರ ಹಾದಿ ಹೇಗೆ ಸಾಗಿದೆ ಅನ್ನೋದನ್ನು ಹೇಳುತ್ತೆ. 

ಓರ್ವ ಆಟಗಾರನಾಗಿ ವಿರಾಟ್​​ 31 ಟೆಸ್ಟ್​​ ಆಡಿದ್ದು 41.13ರ ಸರಾಸರಿಯಲ್ಲಿ ಬ್ಯಾಟಿಂಗ್​​​ ಮಾಡುವ ಮೂಲಕ 2098 ರನ್​​ ಕಲೆ ಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ 10 ಅರ್ಧಶತಕ ದಾಖಲಾಗಿದೆ. ಇನ್ನು ನಾಯಕನಾಗಿ ವಿರಾಟ್​​​ 16 ಟೆಸ್ಟ್​​ಗಳಿಂದ 49.12ರ ಸರಾಸರಿಯಲ್ಲಿ 1228 ರನ್​​ ಮಾಡಿದ್ದಾರೆ. ಇದರಲ್ಲಿ 5 ಶತಕ ಹಾಗೂ 2 ಅರ್ಧಶತಕ ಸೇರಿದೆ. 

ಈ ಅಂಕಿ ಆಂಶಗಳು ವಿರಾಟ್​​ ಆಟದ ಮೇಲೆ ಸಾಕಷ್ಟು ಬೆಳಕು ಚೆಲ್ಲುತ್ತೆ. ಓರ್ವ ಆಟಗಾರನಾಗಿ ತೋರಿರೋ ಪ್ರದರ್ಶನಕ್ಕಿಂತಲೂ ಉತ್ತಮ ಪ್ರದರ್ಶನವನ್ನ ನಾಯಕನಾದ್ಮೇಲೆ ತೋರಿದ್ದಾರೆ. ಮೊದಲಿಗಿಂತಲೂ ವಿರಾಟ್​​ ಬ್ಯಾಟಿಂಗ್​​ ಸರಾಸರಿ ಇನ್ನಷ್ಟು ಸುಧಾರಿಸಿದೆ. ಇದು ನಾಯಕನಾಗಿ ತಂಡವನ್ನು ಮುನ್ನಡೆಸೋದ್ರಲ್ಲಿ ಮಾತ್ರವಲ್ಲ ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನವನ್ನು ಮುಂದ್ವರೆಸಿಕೊಂಡು ಬಂದಿದ್ದಾರೆ. 

Latest Videos
Follow Us:
Download App:
  • android
  • ios