ಟೀಂ ಇಂಡಿಯಾ ಗೆದ್ದರೆ ನಂ.1 ಸ್ಥಾನ ಗಟ್ಟಿ

Virat Kohli and crew eye No 1 rank
Highlights

ಭಾರತ ತಂಡದ ಆರಂಭಿಕ ಬ್ಯಾಟ್ಸ್‌'ಮನ್ ಶಿಖರ್ ಧವನ್, ಆಫ್ರಿಕಾ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದರೆ ತಮ್ಮ ವೃತ್ತಿಬದುಕಿನಲ್ಲಿ 100 ಏಕದಿನ ಪಂದ್ಯಗಳನ್ನು ಪೂರೈಸಲಿದ್ದಾರೆ. ಭಾರತ ಪರ 100 ಏಕದಿನಗಳನ್ನಾಡಿದ 34ನೇ ಆಟಗಾರ ಎನ್ನುವ ಕೀರ್ತಿಗೆ ದೆಹಲಿ ಆಟಗಾರ ಪಾತ್ರರಾಗಲಿದ್ದಾರೆ.

ಜೊಹಾನ್ಸ್'ಬರ್ಗ್(ಫೆ.10): 4ನೇ ಏಕದಿನ ಪಂದ್ಯವನ್ನು ಭಾರತ ತನ್ನದಾಗಿಸಿಕೊಂಡರೆ, ಐಸಿಸಿ ಏಕದಿನ ರ್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಗಟ್ಟಿಯಾಗುತ್ತದೆ.

3ನೇ ಏಕದಿನಕ್ಕೂ ಮುನ್ನ ಶಿಖರ್ ಧವನ್, ತಂಡ ಪ್ರತಿ ಪಂದ್ಯವನ್ನೂ ಗೆಲ್ಲುವ ಗುರಿ ಹೊಂದಿರುವುದಾಗಿ ಹೇಳಿದ್ದರು. ಇಲ್ಲಿನ ವಾಂಡರರ್ಸ್‌ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಸಾಧಿಸಿದ ಗೆಲುವು, ತಂಡದ ಆತ್ಮವಿಶ್ವಾಸ ವೃದ್ಧಿಸಲು ಕಾರಣವಾಗಿದ್ದು ಅಲ್ಲಿಂದ ತಂಡ ಹಿಂದಿರುಗಿ ನೋಡಿಲ್ಲ.

ಧವನ್‌'ಗೆ 100 ಏಕದಿನದ ಸಂಭ್ರಮ

loader