ಇಂದು ನಾಗ್ಪುರ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ, ನೀರಿನ ಬಾಟಲ್ ಅನ್ನು ಕಸದ ಡಬ್ಬಿಗೆ ಸಾಂಕೇತಿಕವಾಗಿ ಹಾಕುವ ಮೂಲಕ ನಾವು ಪ್ರಧಾನಿಯ ಸ್ವಚ್ಚ ಭಾರತ ಆಶಯಕ್ಕೆ ಬದ್ದರಾಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ 'ಸ್ವಚ್ಚತಾ ಹಿ ಸೇವಾ' ಎಂಬ ಕ್ಯಾಂಪೇನ್'ಗೆ ಕರೆ ನೀಡಿದ್ದು, ಇದಕ್ಕೆ ಟೀಂ ಇಂಡಿಯಾ ಸಾಥ್ ನೀಡಿದೆ.
ಆಗಸ್ಟ್ 27ರಂದು ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ, ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಉದ್ದೇಶದಿಂದ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರ ವರೆಗೆ ಸ್ವಚ್ಚತಾ ಹಿ ಸೇವೆ(ಸ್ವಚ್ಚತೆಯೇ ಸೇವೆ) ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಇಂದು ನಾಗ್ಪುರ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ, ನೀರಿನ ಬಾಟಲ್ ಅನ್ನು ಕಸದ ಡಬ್ಬಿಗೆ ಸಾಂಕೇತಿಕವಾಗಿ ಹಾಕುವ ಮೂಲಕ ನಾವು ಪ್ರಧಾನಿಯ ಸ್ವಚ್ಚ ಭಾರತ ಆಶಯಕ್ಕೆ ಬದ್ದರಾಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಟೀ ಇಂಡಿಯಾ ಸ್ವಚ್ಚತಾ ಹಿ ಸೇವಾಕ್ಕೆ ಕರೆ ಕೊಟ್ಟಿದ್ದು ಹೀಗೆ...