Asianet Suvarna News Asianet Suvarna News

ವಿಶ್ವದ ಶ್ರೀಮಂತ ಕ್ರಿಕೆಟಿಗರ ಪೈಕಿ ನಾಯಕ ವಿರಾಟ್ ಕೊಹ್ಲಿಗೆ ಮೊದಲ ಸ್ಥಾನ

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪೈಕಿ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ 83ನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ ವೇತನ ಬರೋಬ್ಬರಿ 155 ಕೋಟಿ ರೂಪಾಯಿ. ಹಾಗಾದರೆ ಮೊದಲ ಸ್ಥಾನ ಅಲಂಕರಿಸಿದ ಅಮೇರಿಕಾ ಬಾಕ್ಸರ್ ಫ್ಲಾಯ್ಡಿ ಮೇವೆದರ್ ಆದಾಯ ಏಷ್ಟು ಗೊತ್ತಾ. ಇಲ್ಲಿದೆ ಡಿಟೇಲ್ಸ್

Virat Kohli among world's highest-paid athletes Forbes

ನವದೆಹಲಿ(ಜೂನ್.6): ಗರಿಷ್ಠ ಸಂಭಾವನೆ ಪಡೆಯುತ್ತಿರುವ ವಿಶ್ವದ 100 ಕ್ರೀಡಾಪಟುಗಳ ನೂತನ ಪಟ್ಟಿಯನ್ನ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ಗರಿಷ್ಠ ಸಂಭಾವನೆ ಪಡೆಯುತ್ತಿರುವ ವಿಶ್ವದ ಕ್ರೀಡಾಪಟುಗಳ ಪೈಕಿ ನಾಯಕ ವಿರಾಟ್ ಕೊಹ್ಲಿ 83ನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಕ್ರಿಕೆಟ್‌ನಿಂದ  21 ಕೋಟಿ 81 ಲಕ್ಷದ 40 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇನ್ನು ಜಾಹೀರಾತು ಹಾಗೂ ಇತರ ಎಂಡೋರ್ಸ್‌ಮೆಂಟ್‌ನಿಂದ ಕೊಹ್ಲಿ134 ಕೋಟಿ 12 ಲಕ್ಷದ 50 ಸಾವಿರ ರೂಪಾಯಿ ಗಳಿಸುತ್ತಿದ್ದಾರೆ. 2017ರ ಫೋರ್ಬ್ಸ್ ಪಟ್ಟಿಯಲ್ಲಿ 87ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ, ವರ್ಷ 4 ಸ್ಥಾನ ಏರಿಕೆ ಕಂಡಿದ್ದಾರೆ. 

ಈ ಬಾರಿಯೂ ಅಮೇರಿಕಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಗರಿಷ್ಠ ವೇತನ ಪಡೆಯುತ್ತಿರುವ  ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.  41 ವರ್ಷದ ವೃತ್ತಿಪರ ಬಾಕ್ಸರ್ ಮೇವೆದರ್ ಆದಾಯ 1911 ಕೋಟಿ 42 ಲಕ್ಷದ 32 ಸಾವಿರದ 500 ರೂಪಾಯಿ. 

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ 2ನೇ ಕ್ರೀಡಾಪಟು ಅಮೇರಿಕಾದ ವೃತ್ತಿಪರ ಬಾಸ್ಕೆಟ್ ಬಾಲ್ ಪ್ಲೇಯರ್ ಲೇ ಬ್ರಾನ್ ಜೇಮ್ಸ್. ಲೇಬ್ರಾನ್ ಜೇಮ್ಸ್  ಆದಾಯ 573 ಕೋಟಿ 34 ಲಕ್ಷದ 16 ಸಾವಿರದ 250 ರೂಪಾಯಿ. 

100 ಕ್ರೀಡಾಪಟುಗಳ ಪಟ್ಟಿಯಲ್ಲಿ ಈ ಬಾರಿ ಯಾವುದೇ ಮಹಿಳಾ ಆಟಗಾರರು ಸ್ಥಾನ ಪಡೆದಿಲ್ಲ. ಕಳೆದ ಬಾರಿ ರಶ್ಯಾದ ಟೆನಿಸ್ ಪಟು ಮರಿಯಾ ಶರಪೋವಾ ಹಾಗೂ ಅಮೇರಿಕಾದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಸ್ಥಾನ ಪಡೆದಿದ್ದರು. 

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಪ್ 5 ಕ್ರೀಡಾಪಟುಗಳು:

1) ಫ್ಲಾಯ್ಡ್ ಮೇವೆದರ್ (ಬಾಕ್ಸಿಂಗ್)ಅಮೇರಿಕಾ
2)ಲೇಬ್ರಾನ್ ಜೇಮ್ಸ್ (ಬಾಸ್ಕೆಟ್ ಬಾಲ್)ಅಮೇರಿಕಾ
3) ಲಿಯೋನಲ್ ಮೆಸ್ಸಿ (ಫುಟ್ಬಾಲ್) ಅರ್ಜೆಂಟೀನಾ
4)ಕ್ರಿಸ್ಟಿಯಾನೋ ರೋನಾಲ್ಡೋ (ಫುಟ್ಬಾಲ್) ಪೋರ್ಚುಗಲ್
5)ಕೊನಾರ್ ಮೆಕ್ ಗ್ರೆಗೊರ್ (ಮಾರ್ಶಲ್ ಆರ್ಟ್) ಐರ್ಲೆಂಡ್

Follow Us:
Download App:
  • android
  • ios