ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಉತ್ತಮ ಎಂದ ಆಸೀಸ್ ವಿಶ್ವಕಪ್ ವಿಜೇತ ನಾಯಕ
ನವದೆಹಲಿ(ಸೆ.12): ನಾಯಕತ್ವದ ವಿಷಯಕ್ಕೆ ಬಂದರೆ ಭಾರತ ತಂಡದ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇಬ್ಬರೂ ಸಮಬಲರು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ. ನಾಯಕ ಹಾಗೂ ಬ್ಯಾಟ್ಸ್ಮನ್ ಆಗಿ ಇಬ್ಬರಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆಗೆ ಉತ್ತರಿಸಿದ ಕ್ಲಾರ್ಕ್,‘ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟ್ಸ್ಮನ್. ಆದರೆ ಟೆಸ್ಟ್ ಮಾದರಿಯಲ್ಲಿ ಸ್ಮಿತ್ ಮುಂಚೂಣಿಯಲ್ಲಿದ್ದಾರೆ’ ಎಂದಿದ್ದಾರೆ. ‘ಇನ್ನು ನಾಯಕತ್ವದ ವಿಷಯಕ್ಕೆ ಬಂದರೆ ಇಬ್ಬರು ಸಮಾನರು. ಸದ್ಯದ ಸಂದರ್ಭದಲ್ಲಿ ತಂಡದ ವಿಜಯದಲ್ಲಿ ವಿರಾಟ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನೀವು ಎಷ್ಟು ರನ್ ಹೊಡೆಯುತ್ತೀರಾ ಎಂಬುದಕ್ಕಿಂತ ಅಂತಿಮವಾಗಿ ನಿಮ್ಮ ತಂಡ ಗೆಲುವು ಸಾಧಿಸುತ್ತದೆಯೋ, ಇಲ್ಲವೋ ಎಂಬುದು ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ.

