ವಿರಾಟ್ ಕೊಹ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬು-ಸಕ್ಲೈನ್ ಮುಷ್ತಾಕ್

First Published 27, Aug 2018, 5:13 PM IST
Virat is the backbone of Indian batting Saqlain Mushtaq
Highlights

ಇಂಗ್ಲೆಂಡ್ ಸ್ಪಿನ್ ಕೋಚ್, ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಕ್ಲೈನ್ ಮುಷ್ತಾಕ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಹಾಡಿ ಹೊಗಳಿದ್ದಾರೆ. ಅಷ್ಟಕ್ಕೂ ಮುಷ್ತಾಕ್ ಹೇಳಿದ್ದೇನು? ಇಲ್ಲಿದೆ.

ಲಂಡನ್(ಆ.27): ಟೀಂ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಶಕ್ತಿಗೆ ಮುಖ್ಯ ಕಾರಣ ನಾಯಕ ವಿರಾಟ್ ಕೊಹ್ಲಿ. ಕೊಹ್ಲಿಯೇ ಭಾರತದ ತಂಡದ ಬೆನ್ನೆಲುಬು ಎಂದು ಪಾಕಿಸ್ತಾನ ಮಾಜಿ ಸ್ಪಿನ್ನರ್, ಇಂಗ್ಲೆಂಡ್ ತಂಡದ ಸ್ಪಿನ್ ಕೋಚ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ದಿಗ್ಗಜ ಬ್ಯಾಟ್ಸ್‌ಮನ್. ಸಚಿನ್ ಜೊತೆ ವಿರಾಟ್ ಕೊಹ್ಲಿಯನ್ನ ಹೋಲಿಕೆ ಮಾಡುವುದು ಸೂಕ್ತವಲ್ಲ. ಆದರೆ ಸಚಿನ್ ಹತ್ತಿರ ನಿಲ್ಲುವ ಬ್ಯಾಟ್ಸ್‌ಮನ್ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ ಎಂದು ಮುಷ್ತಾಕ್ ಹೇಳಿದ್ದಾರೆ.

ಕೊಹ್ಲಿಯಲ್ಲಿ ರನ್ ದಾಹವಿದೆ. ಪ್ರತಿ ಪಂದ್ಯದಿಂದ ಪಂದ್ಯಕ್ಕೆ ವೀಕ್ನೆಸ್‌ಗಳನ್ನ ಸರಿಪಡಿಸಿಕೊಳ್ಳುವ ಗುಣವಿದೆ. ಕಠಿಣ ಅಭ್ಯಾಸ ಹಾಗೂ ಆತ್ಮವಿಶ್ವಾಸ ಕೊಹ್ಲಿಯ ಶಕ್ತಿ. ಹೀಗಾಗಿಯೇ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ ಎಂದು ಮುಷ್ತಾಕ್ ಹೇಳಿದ್ದಾರೆ.

loader