ಲಂಡನ್(ಮೇ.06): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲ್ಲಾ ಆವೃತ್ತಿಗಳಂತೆ ಈ ಆವೃತ್ತಿಯಲ್ಲೂ ಪ್ರಶಸ್ತಿ ಗೆಲ್ಲೋ ಆಸೆ ಕೈಬಿಟ್ಟಿದೆ. ಲೀಗ್ ಹಂತದಲ್ಲಿ ಕಳಪೆ ಪ್ರದರ್ಶನ ನೀಡಿದ RCB ಟೂರ್ನಿಯಿಂದ ಹೊರಬಿದ್ದಿದೆ.  ಟೂರ್ನಿಯಿಂದ ಹೊರ ನಡೆದ ಬೆನ್ನಲ್ಲೇ RCB ಮಾಜಿ ಚೇರ್ಮೆನ್ ಹಾಗೂ ಮಾಲೀಕ ವಿಜಯ್ ಮಲ್ಯ ಸೋಲಿಗೆ ಕಾರಣ ಹೇಳಿದ್ದಾರೆ.

ಇದನ್ನೂ ಓದಿ: ಗೆಲುವಿನೊಂದಿಗೆ 2019ರ IPL ಟೂರ್ನಿಗೆ ವಿದಾಯ ಹೇಳಿದ RCB

RCB ಟೂರ್ನಿಗೆ ವಿದಾಯ ಹೇಳುತ್ತಿದ್ದಂತೆ ನಾಯಕ ವಿರಾಟ್ ಕೊಹ್ಲಿ ಸೋಲು ಗೆಲುವಿನಲ್ಲಿ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಇದರ ಬೆನ್ನಲ್ಲೇ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಪ್ರತಿ ಆವೃತ್ತಿಯಲ್ಲಿ RCB ಅತ್ಯುತ್ತಮ ತಂಡ. ಆದರೆ ಇದು ಪೇಪರ್‌ನಲ್ಲಿ ಮಾತ್ರ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವುದು ತುಂಬಾ ನೋವಾಗಿದೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: RCB ಅಭಿಮಾನಿಗಳಿಗೆ ಕನ್ನಡದಲ್ಲಿ ವಿರಾಟ್ ಕೊಹ್ಲಿ ಟ್ವೀಟ್!

ಟ್ವೀಟ್ ಮೂಲಕ ಮಲ್ಯ, RCB ಪೇಪರ್ ಮಾತ್ರ ಬಲಿಷ್ಠವಾಗಿದೆ, ಆದರೆ ಮೈದಾನದಲ್ಲಿ ಅಲ್ಲ. ಇದು ಸೋಲಿಗೆ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಲೀಗ್ ಪಂದ್ಯದಲ್ಲಿ 5 ಗೆಲುವು ಹಾಗೂ8 ಸೋಲು ಕಂಡಿದೆ. ಈ ಮೂಲಕ 11 ಅಂಕ ಸಂಪಾದಿಸಿದೆ. ಇಷ್ಟೇ ಅಲ್ಲ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 12 ಆವೃತ್ತಿಗಳಲ್ಲಿ RCB ಪ್ರಶಸ್ತಿ ಗೆಲುವಿನ ಆಸೆ ಕೈಗೂಡಿಲ್ಲ.