Asianet Suvarna News Asianet Suvarna News

ಮುರಳಿ ವಿಜಯ್, ಪೂಜಾರಾ ಶತಕದ ಆಸರೆ: ಬೃಹತ್ ಮೊತ್ತದತ್ತ ಭಾರತ

ದಿನದಾಟ ಆರಂಭಿಸಿದ್ದ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ದ್ವಿಶತಕ(209) ಜೊತೆಯಾಟದೊಂದಿಗೆ ಇಬ್ಬರು ಶತಕ ಬಾರಿಸಿದರು. ಮುರಳಿ ವಿಜಯ್ ತಮ್ಮ ವೃತ್ತಿ ಜೀವನದ 10ನೇ ಶತಕ ಸ್ಫೋಟಿಸಿದರೆ, ಪೂಜಾರಾ 14ನೇ ಬಾರಿ ನೂರರ ಗಡಿ ದಾಟಿದರು.

Vijay and Pujara tons propel IND

ನಾಗ್ಪುರ(ನ.25): ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್'ನ ಮೊದಲ ಇನ್ನಿಂಗ್ಸ್'ನಲ್ಲಿ ಬೃಹತ್ ಮೊತ್ತ ದಾಖಲಿಸುವತ್ತ ಮುನ್ನಡೆಯುತ್ತಿದೆ.

ಮೊದಲ ದಿನದ ಇನ್ನಿಂಗ್ಸ್ ಆರಂಭದಲ್ಲಿಯೇ ಕೆ.ಎಲ್. ರಾಹುಲ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಟೀಂ ಇಂಡಿಯಾ 2ನೇ ದಿನದ ಅಂತ್ಯದವರೆಗೂ ಕಳೆದುಕೊಂಡಿದ್ದು ಕೇವಲ ಒಂದೇ ವಿಕೇಟ್. ಶ್ರೀಲಂಕಾ ಬೌಲರ್'ಗಳು ದಿನವಿಡಿ ಬೆವರು ಸುರಿಸಿದರೂ ಕಿತ್ತಿದ್ದು ಮಾತ್ರ ಒಂದೇ ವಿಕೇಟ್.

ಮುರಳಿ 10, ಪೂಜಾರ 14ನೇ ಶತಕ ದಾಖಲು

ದಿನದಾಟ ಆರಂಭಿಸಿದ್ದ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ದ್ವಿಶತಕ(209) ಜೊತೆಯಾಟದೊಂದಿಗೆ ಇಬ್ಬರು ಶತಕ ಬಾರಿಸಿದರು. ಮುರಳಿ ವಿಜಯ್ ತಮ್ಮ ವೃತ್ತಿ ಜೀವನದ 10ನೇ ಶತಕ ಸ್ಫೋಟಿಸಿದರೆ, ಪೂಜಾರಾ 14ನೇ ಬಾರಿ ನೂರರ ಗಡಿ ದಾಟಿದರು.

ಮುರಳಿ ವಿಜಯ್ 221 ಎಸೆತಗಳಲ್ಲಿ  11 ಬೌಂಡರಿ, 1 ಸಿಕ್ಸ್'ರ್'ನೊಂದಿಗೆ  128 ರನ್ ಸಿಡಿಸಿದರೆ, ತಾಳ್ಮೆಯ ಆಟವಾಡಿದ 284 ಚಂಡುಗಳಲ್ಲಿ 13 ಬೌಂಡರಿಗಳೊಂದಿಗೆ 121 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. 75ನೇ ಓವರ್'ನಲ್ಲಿ ತಂಡದ ಮೊತ್ತ 216 ಆಗಿದ್ದಾಗ  ಹೆರಾತ್ ಬೌಲಿಂಗ್'ನಲ್ಲಿ  ಮುರಳಿ ವಿಜಯ್ ಪೆರೇರಾಗೆ ಕ್ಯಾಚ್ ನೀಡಿ ಔಟಾದರು.

ನಂತರ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಪೂಜಾರ ಅವರೊಂದಿಗೆ  ಬಿರುಸಿನ ಆಟವಾಡಲು ಶುರು ಮಾಡಿದರು. 70 ಎಸತಗಳನ್ನು ಎದುರಿಸಿದ ಅವರು 6 ಬೌಂಡರಿಗಳೊಂದಿಗೆ ಅಜೇಯರಾಗಿ ಅರ್ಧ ಶತಕ(54) ದಾಖಲಿಸಿದ್ದಾರೆ. 2ನೇ ದಿನದ ಆಟ ಕೊನೆಗೊಂಡಾಗ ಭಾರತ 98 ಓವರ್'ಗಳಲ್ಲಿ 312/2 ಕಲೆ ಹಾಕಿತ್ತು.  

ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್ 98 ಓವರ್'ಗಳಲ್ಲಿ 312/2

(ಎಂ.ವಿಜಯ್ 128, ಪೂಜಾರ ಅಜೇಯ 121 ಹಾಗೂ ಕೊಹ್ಲಿ ಅಜೇಯ 54)

ಶ್ರೀಲಂಕಾ 205/10              

Follow Us:
Download App:
  • android
  • ios