ವಿದರ್ಭ ಪರ ಮತ್ತೊಮ್ಮೆ ಮಿಂಚಿನ ದಾಳಿ ನಡೆಸಿದ ರಜನೀಶ್ ಗುರ್ಬಾನಿ 68/7 ವಿಕೆಟ್ ಕಬಳಿಸು ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಕಬಳಿಸಿದ ಗುರ್ಬಾನಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಕೋಲ್ಕತ(ಡಿ.21): ಕರ್ನಾಟಕ ತಂಡ ಫೈನಲ್ ಪ್ರವೇಶಿಸುವ ಕನಸು ಭಗ್ನವಾಗಿದೆ. ತೀವ್ರ ರೋಚಕತೆಯಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಕರ್ನಾಟಕ ಕೇವಲ 5 ರನ್'ಗಳಿಂದ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ. ವಿದರ್ಭ ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದು, ಇಂದೋರ್'ನಲ್ಲಿ ನಡೆಯಲಿರುವ ಫೈನಲ್'ನಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ.
ರಜನೀಶ್ ಗುರ್ಬಾನಿ ಮಾರಕ ದಾಳಿಗೆ ತತ್ತರಿಸಿದ ವಿನಯ್ ಕುಮಾರ್ ಪಡೆ ನಾಲ್ಕರ ಘಟ್ಟದಲ್ಲಿ ನಿರಾಸೆ ಅನುಭವಿಸಿದೆ. ಕೊನೆಯ 3 ವಿಕೆಟ್'ಗೆ 87ರನ್ ಗಳಿಸಬೇಕಿದ್ದ ಕರ್ನಾಟಕ ನಾಯಕ ವಿನಯ್ ಕುಮಾರ್(36), ಅಭಿಮನ್ಯು ಮಿಥುನ್(33) ಹಾಗೂ ಶ್ರೇಯಸ್ ಗೋಪಾಲ್(24*) ಹೋರಾಟದ ಹೊರತಾಗಿಯೂ ಕೇವಲ 5 ರನ್'ಗಳ ಅಂತರದಲ್ಲಿ ನಿರಾಸೆ ಅನುಭವಿಸಿದೆ.
ವಿದರ್ಭ ಪರ ಮತ್ತೊಮ್ಮೆ ಮಿಂಚಿನ ದಾಳಿ ನಡೆಸಿದ ರಜನೀಶ್ ಗುರ್ಬಾನಿ 68/7 ವಿಕೆಟ್ ಕಬಳಿಸು ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಕಬಳಿಸಿದ ಗುರ್ಬಾನಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್:
ವಿದರ್ಭ: 185&313
ಕರ್ನಾಟಕ: 301&192