ವಿಂಬಲ್ಡನ್ ಸಿಂಗಲ್ಸ್‌ನಲ್ಲಿ 100ನೇ ಪಂದ್ಯವಾಡಿದ ವೀನಸ್, 86ನೇ ಗೆಲುವು ಸಾಧಿಸಿ ದಾಖಲೆ ಬರೆದರು.

ಲಂಡನ್(ಜು.11) ಅಮೆರಿಕದ ಅನುಭವಿ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್, ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಲಾತ್ವಿಯಾದ ಎಲೆನಾ ಒಸ್ಟಪೆನ್ಕೊ ವಿರುದ್ಧ ವೀನಸ್ 6-3, 7-5 ನೇರ ಸೆಟ್‌'ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ವಿಂಬಲ್ಡನ್ ಸಿಂಗಲ್ಸ್‌ನಲ್ಲಿ 100ನೇ ಪಂದ್ಯವಾಡಿದ ವೀನಸ್, 86ನೇ ಗೆಲುವು ಸಾಧಿಸಿ ದಾಖಲೆ ಬರೆದರು. 20ನೇ ಬಾರಿಗೆ ವಿಂಬಲ್ಡನ್‌ನಲ್ಲಿ ಆಡುತ್ತಿರುವ ವೀನಸ್, 10ನೇ ಬಾರಿಗೆ ಸೆಮಿಫೈನಲ್‌'ಗೇರಿದ ಕೀರ್ತಿಗೂ ಪಾತ್ರರಾದರು.

ಮುಗುರುಜಾಗೆ ಜಯ:

ಸ್ಪೇನ್‌'ನ ಗಾರ್ಬೈನ್ ಮುಗುರುಜಾ ಕಳೆದ ಮೂರು ಆವೃತ್ತಿಗಳಲ್ಲಿ 2ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 7ನೇ ಶ್ರೇಯಾಂಕಿತೆ ರಷ್ಯಾದ ಸ್ವೆಟ್ಲಾನಾ ಕುಜ್ನೆಟ್‌'ಸೊವಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಗುರುಜಾ 6-3, 6-4 ನೇರ ಸೆಟ್‌'ಗಳಲ್ಲಿ ನಿರಾಯಾಸವಾಗಿ ಜಯಿಸಿದರು.