ಐಪಿಎಲ್: ಪಂಜಾಬ್‌ಗೆ ವೆಂಕಿ ಬೌಲಿಂಗ್ ಕೋಚ್

First Published 4, Mar 2018, 2:00 PM IST
Venkatesh Prasad Appointed Bowling Coach at Kings XI Punjab
Highlights

ಶುಕ್ರವಾರವಷ್ಟೇ ಅವರು ಬಿಸಿಸಿಐ ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಐಪಿಎಲ್ ಹುದ್ದೆಗೇರುವ ಉದ್ದೇಶದಿಂದ ಪ್ರಸಾದ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿತ್ತು.

ನವದೆಹಲಿ(ಮಾ.04): ಐಪಿಎಲ್ 11ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ವೆಂಕಟೇಶ್ ಪ್ರಸಾದ್  ಅವರನ್ನು ನೇಮಕ ಮಾಡಲಾಗಿದೆ.

ಶುಕ್ರವಾರವಷ್ಟೇ ಅವರು ಬಿಸಿಸಿಐ ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಐಪಿಎಲ್ ಹುದ್ದೆಗೇರುವ ಉದ್ದೇಶದಿಂದ ಪ್ರಸಾದ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿತ್ತು.

ಪಂಜಾಬ್ ತಂಡದ ಚೀಪ್ ಮೆಂಟರ್ ಆಗಿ ವೀರೇಂದ್ರ ಸೆಹ್ವಾಗ್ ಕಾರ್ಯ ನಿರ್ವಹಿಸುತ್ತಿದ್ದು, ಬ್ರಾಡ್ ಹಾಗ್ ಮುಖ್ಯ ಕೋಚ್ ಆಗಿದ್ದಾರೆ.  ಇದೇ  ವೇಳೆ ಪ್ರಸಾದ್ ರಾಜೀನಾಮೆಯಿಂದ ತೆರವುಗೊಂಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನವನ್ನು ಭಾರತದ ಮಾಜಿ ಆಫ್ ಸ್ಪಿನ್ನರ್ ಆಶಿಶ್ ಕಪೂರ್ ತುಂಬಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.

loader