22 ವಷರ್ಷಗಳ ಬಳಿಕ ಎದುರಾದ ಕ್ರಿಕೆಟ್ ದಿಗ್ಗಜರು! ವೆಂಕಟೇಶ್ ಪ್ರಸಾದ್ ಮತ್ತು ಅಮೀರ್ ಸೊಹೈಲ್ ಭೇಟಿ! 1996ರ ವಿಶ್ವಕಪ್ ನಲ್ಲಿ ಇಬ್ಬರ ನಡುವೆ ನಡೆದಿದ್ದ ಚಕಮಕಿ!ಹಳೆಯ ನೆನಪು ಮೆಲುಕು ಹಾಕಿದ ದಿಗ್ಗಜ ಆಟಗಾರರು 

ದುಬೈ(ಸೆ.24): 1996ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ.
ಭಾರತ-ಪಾಕ್ ವೈರತ್ವವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ಪಂದ್ಯವದು. 

ಪಾಕ್‌ನ ಅಮೀರ್ ಸೊಹೈಲ್ ಹಾಗೂ ಭಾರತದ ವೆಂಕಟೇಶ್ ಪ್ರಸಾದ್ ನಡುವಿನ ಚಕಮಕಿ ಎಲ್ಲರ ಗಮನ ಸೆಳೆದಿತ್ತು. 22 ವರ್ಷಗಳ ಬಳಿಕ ಸೊಹೈಲ್ ಹಾಗೂ ಪ್ರಸಾದ್ ಭೇಟಿಯಾಗಿ, ತಮ್ಮ ನಡುವೆ ನಡೆದ ಚಕಮಕಿಯ ಕುರಿತು ಮೆಲುಕು ಹಾಕಿದ್ದಾರೆ.

Scroll to load tweet…

ಏಷ್ಯಾಕಪ್ ಪ್ರಸಾರ ಹಕ್ಕು ಹೊಂದಿರುವ ‘ಸ್ಟಾರ್ ಸ್ಪೋರ್ಟ್ಸ್’ವಾಹಿನಿ ನಡೆಸಿದ ವಿಶೇಷ ಕಾರ್ಯಕ್ರಮದಲ್ಲಿ ಈ ಇಬ್ಬರು ಮಾಜಿ ಕ್ರಿಕೆಟಿಗರು ಭೇಟಿಯಾಗಿದ್ದರು. ಇವರಿಬ್ಬರ ಮಾತುಕತೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಸೇರಿ ಅನೇಕರು ಪ್ರತಿಕ್ರಿಯಿಸಿದ್ದಾರೆ.