Asianet Suvarna News Asianet Suvarna News

ತಿರುಪತಿಗೆ ಹೋಗಿ ಬೆಂಗಳೂರಿನಲ್ಲಿ ಭಾರಿ ಮಳೆಗಾಗಿ ಪ್ರಾರ್ಥಿಸಿದರೆ ಲಕ್ಷ್ಮಣ್ ! ಅಷ್ಟಕ್ಕೂ ವೀರು ಮಾಡಿದ್ದಾದರೂ ಏನು ?

ತಿರುಪತಿಗೆ ಹೋಗಿ ಬೆಂಗಳೂರಿನಲ್ಲಿ ಭಾರಿ ಮಳೆಗಾಗಿ ಪ್ರಾರ್ಥಿಸಿದರೆ ಲಕ್ಷ್ಮಣ್‌ ! ಅಷ್ಟಕ್ಕೂ ವೀರು ಮಾಡಿದ್ದಾದರೂ ಏನು ?

Veeru Tweet about VVS Lakshman
  • Facebook
  • Twitter
  • Whatsapp

ಎಲಿಮಿನೇಟರ್‌ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಾಗ ಸನ್‌ರೈಸ​ರ್‍ಸ್ ಪಾಳಯ ಖುಷಿಯಲ್ಲಿತ್ತು. ಹೀಗಾಗಿ, ಟ್ವಿಟರ್‌ನಲ್ಲಿ ವೀರೇಂದ್ರ ಸೆಹ್ವಾಗ್‌ ತಮ್ಮ ಮಾಜಿ ಸಹ ಆಟಗಾರ ಹಾಗೂ ಸನ್‌ರೈಸ​ರ್‍ಸ್ ತಂಡದ ಬ್ಯಾಟಿಂಗ್‌ ಸಲಹೆಗಾರ ವಿವಿಎಸ್‌ ಲಕ್ಷ್ಮಣ್‌ ಕಾಲೆಳೆದರು. ಈ ಹಿಂದೆ ಲಕ್ಷ್ಮಣ್‌ ತಿರುಪತಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದ ಚಿತ್ರಗಳನ್ನು ಪೋಸ್ಟ್‌ ಮಾಡಿ, ‘ಲಕ್ಷ್ಮಣ್‌ ಜೀ ಬೆಂಗಳೂರಲ್ಲಿ ಭಾರೀ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಪಂದ್ಯ ಪೂರ್ತಿ ನಡೆಯಬೇಕು' ಎಂದು ಬರೆದಿದ್ದರು. ಈ ಪೋಸ್ಟ್‌, ಟ್ವಿಟರ್‌ನಲ್ಲಿ ವೈರಲ್‌ ಆಯಿತು.

Follow Us:
Download App:
  • android
  • ios