2002-03ರಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಉತ್ತಪ್ಪ (2013-14, 14-15)ರ ರಣಜಿ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸುಮಾರು 15 ವರ್ಷಗಳ ಕಾಲ ಕರ್ನಾಟಕ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಉತ್ತಪ್ಪ ರಾಜ್ಯ ತಂಡ ತೊರೆಯಲು ಸಿದ್ಧವಾಗಿದ್ದಾರೆ.
ಬೆಂಗಳೂರು(ಆ.05): ಕನ್ನಡಿಗ ರಾಬಿನ್ ಉತ್ತಪ್ಪ ಈ ಬಾರಿಯ ರಣಜಿ ಋತುವಿನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಹೌದು ಕರ್ನಾಟಕ ರಣಜಿ ತಂಡದ ಆಧಾರಸ್ತಂಭವಾಗಿದ್ದ ಉತ್ತಪ್ಪ, ಈ ಮೊದಲು ಕೇರಳ ಪರ ಆಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಕೇರಳ ಕ್ರಿಕೆಟ್ ಸಂಸ್ಥೆ ಸಹ ಇದನ್ನು ಸ್ಪಷ್ಟಪಡಿಸಿತ್ತು.
ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅವರು ಈ ಬಾರಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ 'ಕನ್ನಡಪ್ರಭ' ಅವರನ್ನು ಸಂಪರ್ಕಿಸಿದಾಗ ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.