‘‘ಬದುಕಿನಲ್ಲಿ ಇಂಥದ್ದೆಲ್ಲಾ ಘಟಿಸುತ್ತಲೇ ಇರುತ್ತದೆ. ಪದಕ ಹಿಂದಿರುಗಿಸಬೇಕೆಂಬುದೇ ಆದಲ್ಲಿ ನಾನದಕ್ಕೆ ಸಿದ್ಧ’’ ಎಂದು ಬೋಲ್ಟ್ ಪ್ರತಿಕ್ರಿಯಿಸಿದ್ದಾರೆ.

ಕಿಂಗ್ಸ್‌ಟನ್(ಜ.25): ಬೀಜಿಂಗ್ ಒಲಿಂಪಿಕ್ಸ್ ಕೂಟದ ಪುರುಷರ 4/100 ಮೀ. ರಿಲೇ ತಂಡದಲ್ಲಿದ್ದ ಸಹ ಓಟಗಾರ ನೆಸ್ಟಾ ಕಾರ್ಟರ್ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಿಶ್ವ ಶರವೇಗಿ, ಜಮೈಕಾ ರನ್ನರ್ ಉಸೇನ್ ಬೋಲ್ಟ್ ಅವರಿಂದ ಪದಕ ಕೈತಪ್ಪಲಿದೆ.

ಹೀಗಾಗಿ 2008ರಿಂದ 2016ರವರೆಗಿನ ಒಲಿಂಪಿಕ್ ಕೂಟದಲ್ಲಿ 100, 200 ಮತ್ತು 4/100 ಮೀ. ಓಟದಲ್ಲಿ ಸತತ ಚಿನ್ನ ಗೆದ್ದಿದ್ದ ಬೋಲ್ಟ್ ಅವರ 9 ಒಲಿಂಪಿಕ್ ಪದಕಗಳಲ್ಲಿ ಒಂದು ಅವರ ಕೈಬಿಟ್ಟು ಹೋಗಿದೆ. ಮಾತ್ರವಲ್ಲ, ‘ಟ್ರಿಪಲ್ ಟ್ರಿಪಲ್ ಚಾಂಪಿಯನ್’ ಎಂಬ ಬಿರುದಾಂಕಿತವೂ ಅವರಿಂದ ಜಾರಿಹೋಗಿದೆ.

 ‘‘ಬದುಕಿನಲ್ಲಿ ಇಂಥದ್ದೆಲ್ಲಾ ಘಟಿಸುತ್ತಲೇ ಇರುತ್ತದೆ. ಪದಕ ಹಿಂದಿರುಗಿಸಬೇಕೆಂಬುದೇ ಆದಲ್ಲಿ ನಾನದಕ್ಕೆ ಸಿದ್ಧ’’ ಎಂದು ಬೋಲ್ಟ್ ಪ್ರತಿಕ್ರಿಯಿಸಿದ್ದಾರೆ.