ಜಮೈಕಾದ ಜನತೆಗಾಗಿ 2017 ರ ಜೂನ್ 10 ರಂದು ನಡೆಯಲಿರುವ ರೇಸರ್ಸ್‌ ಗ್ರಾಂಡ್ ಪ್ರಿಕ್ಸ್ ಕೂಟ ಜಮೈಕಾದ ಆಟಗಾರನ ಮಿಂಚಿನ ಓಟಕ್ಕೆ ಸಾಕ್ಷಿಯಾಗಲಿದೆ.

ಲಂಡನ್(ಅ.15): ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್ ಕ್ರೀಡಾಕೂಟ ಮತ್ತು ಜಮೈಕಾದಲ್ಲಿ ನಡೆಯುವ ರೇಸರ್ಸ್‌ ಗ್ರಾಂಡ್ ಪ್ರಿಕ್ಸ್ ಕೂಟ ವೃತ್ತಿ ಬದುಕಿನ ಕೊನೆಯ ಓಟವಾಗಲಿದೆ ಎಂದು ವಿಶ್ವದ ಸ್ಟಾರ್ ವೇಗದ ಓಟಗಾರ ಉಸೇನ್ ಬೋಲ್ಟ್ ಹೇಳಿದ್ದಾರೆ.

2017 ರ ಜೂನ್ 10 ರಂದು ನಡೆಯಲಿರುವ ರೇಸರ್ಸ್‌ ಗ್ರಾಂಡ್ ಪ್ರಿಕ್ಸ್ ಕೂಟ ಜಮೈಕಾದ ಆಟಗಾರನ ಮಿಂಚಿನ ಓಟಕ್ಕೆ ಸಾಕ್ಷಿಯಾಗಲಿದೆ.

ಬೋಲ್ಟ್ ಇತ್ತೀಚೆಗೆ ನಡೆದ ರಿಯೊ ಒಲಿಂಪಿಕ್ಸ್ ಕೂಟದಲ್ಲಿ 100, 200 ಮತ್ತು 4/100ಮೀ ಓಟದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಸತತ ಮೂರು ಒಲಿಂಪಿಕ್ಸ್'ನಲ್ಲಿ ಟ್ರಿಪಲ್.. ಟ್ರಿಪಲ್ ಸಾಧನೆ ಮಾಡಿದ ಏಕೈಕ ಓಟಗಾರ ಎನಿಸಿದ್ದರು.

ನಾನು ಲಂಡನ್'ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್'ಷಿಪ್ ನಂತರ ವಿದಾಯ ಹೇಳಲಿದ್ದೇನೆ. ತವರಿನ ಅಭಿಮಾನಿಗಳಿಗಾಗಿ ರೇಸರ್ಸ್ ಗ್ರಾಂಡ್ ಪ್ರಿಕ್ಸ್'ನಲ್ಲಿ ಭಾಗವಹಿಸಲಿದ್ದೇನೆ ಎಂದು ಬೋಲ್ಟ್ ತಿಳಿಸಿದ್ದಾರೆ.

ರೇಸರ್ಸ್‌ ಗ್ರಾಂಡ್ ಪ್ರಿಕ್ಸ್ ಓಟವನ್ನು ತವರಿನ ಅಭಿಮಾನಿಗಳಿಗಾಗಿ ಅರ್ಪಿಸುವ ಮೂಲಕ ತನ್ನ ಓಟವನ್ನು ಕೊನೆಗೊಳಿಸಲಿದ್ದೇನೆ ಎಂದು ಬೋಲ್ಟ್ ಹೇಳಿದ್ದಾರೆ.