Asianet Suvarna News Asianet Suvarna News

ಮೊದಲ ಪಂದ್ಯದಲ್ಲೇ ಉಸೇನ್ ಬೋಲ್ಟ್‌ 2 ಗೋಲು!

ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಪಡೆದ ಬಳಿಕ ಉಸೇನ್ ಬೋಲ್ಟ್ ತಮ್ಮ ಬಾಲ್ಯದ ಕನಸನ್ನ ನನಸು ಮಾಡಿದ್ದಾರೆ. ವೃತ್ತಿಪರ ಫುಟ್ಬಾಲ್‍‌ಪಟುವಾಗಿರುವ ಉಸೇನ್ ಬೋಲ್ಟ್ ಇದೀಗ ಮೊದಲ ಪಂದ್ಯದಲ್ಲೇ ಗೋಲುಗಳ ಸುರಿಮಳೆ ಸುರಿಸಿದ್ದಾರೆ.

Usain Bolt scored two goals in his first professional soccer start
Author
Bengaluru, First Published Oct 13, 2018, 8:39 AM IST
  • Facebook
  • Twitter
  • Whatsapp

ಸಿಡ್ನಿ(ಅ.13): ವೃತ್ತಿಪರ ಫುಟ್ಬಾಲ್‌ ಬದುಕನ್ನು ವಿಶ್ವದ ವೇಗದ ಮಾನವ ಉಸೇನ್‌ ಬೋಲ್ಟ್‌ ಭರ್ಜರಿಯಾಗಿ ಆರಂಭಿಸಿದ್ದಾರೆ. ಆಸ್ಪ್ರೇಲಿಯಾದ ಸೆಂಟ್ರಲ್‌ ಕೋಸ್ಟ್‌ ಮೆರೈನರ್ಸ್ ತಂಡದ ಪರ ಶುಕ್ರವಾರ ಚೊಚ್ಚಲ ಬಾರಿಗೆ ಕಣಕ್ಕಿಳಿದ ಬೋಲ್ಟ್‌, ಮೆಕಾರ್ಥರ್‌ ಸೌಥ್‌ ವೆಸ್ಟ್‌ ಯುನೈಟೆಡ್‌ ತಂಡದ ವಿರುದ್ಧ ನಡೆದ ಋುತು ಪೂರ್ವ ಸ್ನೇಹಾರ್ಥ ಪಂದ್ಯದಲ್ಲಿ 2 ಗೋಲು ಬಾರಿಸಿ ವಿಶ್ವದ ಗಮನ ಸೆಳೆದರು.

ತಂಡದೊಂದಿಗೆ ವೃತ್ತಿಪರ ಗುತ್ತಿಗೆ ಪಡೆಯಲು ಎದುರು ನೋಡುತ್ತಿರುವ ಬೋಲ್ಟ್‌ 55ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಬಳಿಕ 60ನೇ ನಿಮಿಷದಲ್ಲಿ 2ನೇ ಗೋಲು ಗಳಿಸಿದರು. ಅವರ ಗೋಲುಗಳ ನೆರವಿನಿಂದ ಮೆರೈನ​ರ್‍ಸ್ 4-0 ಗೆಲುವು ಸಾಧಿಸಿತು. 

2017ರಲ್ಲಿ ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಪಡೆದಿದ್ದ ಬೋಲ್ಟ್‌, ಆಗಸ್ಟ್‌ನಲ್ಲಿ ಆಸ್ಪ್ರೇಲಿಯಾಗೆ ಆಗಮಿಸಿ ಮೆರೈನ​ರ್‍ಸ್ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದರು. ತಂಡ ಅನಿದಿಷ್ರ್ಟವಧಿಗೆ ಬೋಲ್ಟ್‌ಗೆ ಅಭ್ಯಾಸ ನಡೆಸಲು ಅನುವು ಮಾಡಿಕೊಟ್ಟಿದ್ದು, ಅ.19ರಿಂದ ಆರಂಭಗೊಳ್ಳಲಿರುವ ಆಸ್ಪ್ರೇಲಿಯಾದ ದೇಸಿ ಋುತುವಿನಲ್ಲಿ ಆಡುವ ಗುರಿ ಹೊಂದಿದ್ದಾರೆ.

Follow Us:
Download App:
  • android
  • ios